ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ರನ್ನು ರಾಜ್ಯದ 6 ಕೋಟಿ ಜನ ಆಯ್ಕೆ ಮಾಡಿದ್ದಾರೆ. ಕೆ.ಸಿ.ವೇಣುಗೋಪಾಲ್ರನ್ನು ಆಯ್ಕೆ ಮಾಡಿಲ್ಲ. ಜುಜುಬಿ ವೇಣುಗೋಪಾಲ್ ಮಾತು ಕೇಳಿಕೊಂಡು ಆಡಳಿತ ಮಾಡುವುದು 6 ಕೋಟಿ ಜನರಿಗೆ ಮಾಡಿರುವ ಅವಮಾನ ಎಂದು ರಾಜ್ಯಸಭಾ ಬಿಜೆಪಿ ಸದಸ್ಯ ಲಹರ್ ಸಿಂಗ್ ಸಿರೋಯಾ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ, ಈ ಸರ್ಕಾರದಿಂದ ಏನೂ ಅಪೇಕ್ಷೆ ಪಡಲು ಸಾಧ್ಯವೇ ಇಲ್ಲ. ಸೋ ಕಾಲ್ಡ್ ಪವರ್ ಫುಲ್ ಲೀಡರ್ಗಳಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಬ್ಬರು ಕೆ.ಸಿ.ವೇಣುಗೋಪಾಲ್ ಮಾತು ಕೇಳಿ ನಾಚಿಕೆಗೇಡಿನ ಕೆಲಸ ಮಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಕೇವಲ ಕುರ್ಚಿ ಜಗಳಕ್ಕೆ ಮಾತ್ರ ಸೀಮಿತ ಅಷ್ಟೇ. ಪ್ರವಾಹ ಸಂತ್ರಸ್ತರಿಗೆ ಮನೆ ಕೊಟ್ಟಿಲ್ಲ, ಡ್ರಗ್ಸ್ ಸಮಸ್ಯೆ ಸರಿಪಡಿಸಿಲ್ಲ, ಇಂತಹ ಸರ್ಕಾರ ನಮಗೆ ಸಿಕ್ಕಿರುವುದು ದುರದೃಷ್ಟಕರ. ಕೆಸಿ ವೇಣುಗೋಪಾಲ ಅಂತಹವರು ನಮ್ಮ ಸರ್ಕಾರ ನಡೆಸಬೇಕಾ?
ಅವರ ಆದೇಶ ನಾವು ಪಾಲಿಸಬೇಕಾ? ಪಾಕಿಸ್ತಾನ ಪ್ರತಿಕ್ರಿಯೆ ಕೊಡುತ್ತದೆ ಎಂದರೆ, ಇದು ಬಹಳ ಭಯನಕ ಟ್ರೆಂಡ್. ಪಶ್ಚಿಮ ಬಂಗಾಳ ರೀತಿ ಇಲ್ಲಿ ಆದರೆ ನಮ್ಮ ಗತಿ ಏನು ಎಂದು ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

