ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಪೊಲೀಸರು ಅನುಮತಿ ನಿರಾಕರಿಸಿದ್ದರೂ ಕಾಲ್ತುಳಿತ ಪ್ರಕರಣದಲ್ಲಿ ರಾಜ್ಯ ಸರ್ಕಾರ ಬೇಜವಾಬ್ದಾರಿತನದಿಂದ ನಡೆದುಕೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತರಾಟೆ ತೆಗೆದುಕೊಂಡರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸ್ವತಃ ಮುಖ್ಯಮಂತ್ರಿಗಳಿಗೆ ಕಮಿಷನರ್ ಬಂದೋಬಸ್ತ್ ಕೊಡಲು ಆಗುವುದಿಲ್ಲ ಎಂದಿದ್ದಾರೆ. ಆದರೆ ಉಪಮುಖ್ಯಮಂತ್ರಿಗಳ ಒತ್ತಾಯದ ಮೇರೆಗೆ ಸಿಎಂ ಹಾಗೂ ಡಿಸಿಎಂ ಪೈಪೋಟಿಯಲ್ಲಿ ಕಾರ್ಯಕ್ರಮ ನಡೆಸಿದ್ದಾರೆ ಎಂದು ಜೋಶಿ ಟೀಕಿಸಿದರು. ಬೆಂಗಳೂರು ಪೊಲೀಸ್ ಕಮಿಷನರ್ ಸಸ್ಪೆಂಡ್ ಮಾಡಿರುವುದು ತಮ್ಮ ಮೇಲಿನ ಆರೋಪವನ್ನು ತೆಗೆದುಕೊಳ್ಳುವುದು ಆಗಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ಅವರನ್ನ ಯಾವ ಕಾರಣಕ್ಕೆ ತೆಗೆದು ಹಾಕಿದ್ದಾರೆ. ಗೋವಿಂದ್ ರಾಜ್ ಅವರ ಮೇಲೆ ಯಾಕೆ ಎಫ್‌ಐಆರ್ ಆಗಿಲ್ಲ ಇಂಥಹ ಕಾರ್ಯಗಳಿಂದ ಅಧಿಕಾರಿಗಳ ಸಸ್ಪೆಂಡ್ ಮಾಡಿ ಜನರನ್ನು ಮರೆಸಲು ಆಗೋದಿಲ್ಲ. ಬಹಳ ದಿನಗಳ ಕಾಲ ಮರೆಯಲು ಆಗದೆ ಇರುವ ಘಟನೆ ಇದು.
ಅತ್ಯಂತ ಬೇಜವಾಬ್ದಾರಿಯಿಂದ ನಡೆದುಕೊಂಡ ಉಪಮುಖ್ಯಮಂತ್ರಿ ಪೈಪೋಟಿಯಲ್ಲಿ ಮುಖ್ಯಮಂತ್ರಿಗಳು ಇದ್ದಾರೆ ಎಂದು ಕೇಂದ್ರ ಸಚಿವರು ವಾಗ್ದಾಳಿ ಮಾಡಿದರು.
ಆರ್ ಸಿಬಿ ಆಟಗಾರರೊಂದಿಗೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಮಂತ್ರಿಗಳ ಮಕ್ಕಳು, ಸೆಲ್ಫಿ ತೆಗೆಸಿಕೊಳ್ಳುತ್ತಿದ್ದರು. ವಿಧಾನಸೌಧದ ಮುಂದೆ ಯಾರು ಪರ್ಮಿಷನ್ ಕೊಟ್ಟಿದ್ದು ಎಂದು ಜೋಶಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.