ಸಿಎಂ-ಡಿಸಿಎಂ ಕುರ್ಚಿ ಗಲಾಟೆಯಲ್ಲಿ ಜನರು ಕಂಗಾಲು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಕುರ್ಚಿ ಗಲಾಟೆಯಲ್ಲಿ ರಾಜ್ಯದ ರೈತರು ಸಮಸ್ಯೆಗಳು,  ಜನರ ಸಂಕಷ್ಟಗಳು ಸರ್ಕಾರಕ್ಕೆ ಬೇಕಾಗಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತರಾಟೆ ತೆಗೆದುಕೊಂಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು
,

ಅಧಿಕಾರ ಹಂಚಿಕೆ ಮಾಡುತ್ತೀರಾ..? ಅಥವಾ ನೀವೇ ಇಟ್ಟುಕೊಳ್ಳುತ್ತೀರಾ ಎಂಬುದು ಪ್ರಶ್ನೆ ಅಲ್ಲ. ಆದರೆ, ನಿಮ್ಮ ಈ ಗುದ್ದಾಟದಲ್ಲಿ ಜನ ಕಂಗಾಲಾಗಿದ್ದಾರೆ. ಅಭಿವೃದ್ಧಿ ಕುಂಠಿತವಾಗಿದೆ. ಅಭಿವೃದ್ಧಿ ಕಾಣದ ಸ್ಥಿತಿಗೆ ರಾಜ್ಯ ಬಂದಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

- Advertisement - 

ಡಿನ್ನರ್, ಬ್ರೇಕ್ ಪಾಸ್ಟ್ ಮಾಡಿದ್ದೇ ಮಾಡಿದ್ದು. ಹಿಂದೆಯಿಂದ ಏನು ಮಾಡಬೇಕೊ ಅದನ್ನು ಮತ್ತೆ ಮತ್ತೆ ಮಾಡುತ್ತಲೇ ಇರೋದು. ಯಾವುದೇ ತೊಂದರೆ ಇಲ್ಲ. ನನ್ನ ಕುರ್ಚಿ ಭದ್ರವಾಗಿದೆ ಅಂತಾ ಹೇಳುತ್ತಾರೆ. ಆದರೆ, ಎರಡು ಗುಂಪುಗಳಿಂದ ಹೋರಾಟ ಮಾತ್ರ ನಿಂತಿಲ್ಲ. ಇವರ ಕಾದಾಟ, ಹೋರಾಟದಲ್ಲಿ ಜನರ ಸಮಸ್ಯೆಗಳು ಉಲ್ಬಣವಾಗುತ್ತಿವೆ. ಯಾವುದೇ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ‌ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಯುವಕರು, ಸಾರ್ವಜನಿಕರು ದೊಡ್ಡ ಮಟ್ಟದಲ್ಲಿ ಹೋರಾಟಕ್ಕೆ ಇಳಿದಿದ್ದಾರೆ. 3 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ. ಖಾಲಿ ಹುದ್ದೆಗಳ ಭರ್ತಿ ಮಾಡಲು ಈ ಸರ್ಕಾರಕ್ಕೆ ಯೋಗ್ಯತೆ ಇಲ್ಲ. ಈ ರೀತಿ ಕೆಟ್ಟ ಸರ್ಕಾರ ನೋಡಲು ಇನ್ನೊಂದಿಗೂ ಜನರಿಗೆ ಸಾಧ್ಯವಿಲ್ಲ ಎಂದು ಟೀಕಾಪ್ರಹಾರ ಮಾಡಿದರು.

- Advertisement - 

ಭತ್ತ, ಮೆಕ್ಕೆಜೋಳ, ಕಬ್ಬು ಬೆಳೆಗಾರರ ಸಮಸ್ಯೆಗಳು ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಸಮಸ್ಯೆಗಳಿವೆ. ಇದರ ಜೊತೆಗೆ ರೈತರ, ದಲಿತರ ಸಮಸ್ಯೆಗಳು ಸಾಕಷ್ಟಿವೆ. ಒಳ ಮೀಸಲಾತಿ ನೆಪವೊಡ್ಡಿ ಖಾಲಿ ಹುದ್ದೆಗಳನ್ನು ತುಂಬಿಕೊಳ್ಳುವುದನ್ನು ನಿಲ್ಲಿಸಿದ್ದಾರೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೇ ಸರ್ಕಾರ ಪರಿತಪಿಸುತ್ತಿದೆ. ಯಾವುದೇ ಪ್ರಶ್ನೆ ಕೇಳಿದರೂ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ಮಾಡಿದರು.

 

Share This Article
error: Content is protected !!
";