ಸಿಎಂ ಅವರೇ ರಾಜೀನಾಮೆ ಕೊಟ್ಟು ಕರ್ನಾಟಕ ಉಳಿಸಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಸಿದ್ದರಾಮಯ್ಯ ನವರೇ, ಸರ್ಕಾರಿ ಆಸ್ಪತ್ರೆ ಬಚಾವೋ ಸಮಾವೇಶ ಯಾವಾಗ ಮಾಡುತ್ತೀರಿ? ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಸಿಗದೆ ಚೀಟಿ ಬರೆದುಕೊಡುವ ದುಸ್ಥಿತಿ ಬಂದು ಬಹಳ ದಿನಗಳಾಯ್ತು.

ಬಿಲ್ ಬಾಕಿ ಉಳಿಸಿಕೊಂಡಿರುವುದಕ್ಕೆ ಸ್ಕ್ಯಾನಿಂಗ್ ಸೇವೆ ಸ್ಥಗಿತಗೊಂಡಿದ್ದೂ ಆಯ್ತು. ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿ ಕೇಂದ್ರಗಳನ್ನು (OPD) ಮುಚ್ಚುವ ಪರಿಸ್ಥಿತಿ ತಂದಿಟ್ಟಿದ್ದೀರಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಾಪ್ರಹಾರ ಮಾಡಿದ್ದಾರೆ.

- Advertisement - 

ನಿಮ್ಮ ನಾಲಾಯಕ್ ಕರ್ನಾಟಕ ಕಾಂಗ್ರೆಸ್ ಸರ್ಕಾರದ ದುರಾಡಳಿತ, ದಿವಾಳಿತನದಿಂದ ದಿನನಿತ್ಯ ಪರದಾಡುತ್ತಿರುವ ಕನ್ನಡಿಗರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು? ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ ಎಂದು ಅಶೋಕ್ ಆಗ್ರಹ ಮಾಡಿದ್ದಾರೆ.

 

- Advertisement - 

 

Share This Article
error: Content is protected !!
";