ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆರೋಗ್ಯ, ಶಿಕ್ಷಣ, ರಾಜಕೀಯ ಪ್ರತಿನಿಧಿತ್ವ, ತಂತ್ರಜ್ಞಾನ, ಅಧಿಕಾರ ವಿಕೇಂದ್ರೀಕರಣ ಹೀಗೆ ಮುಂತಾದ ಕ್ಷೇತ್ರಗಳಲ್ಲಿ ರಾಜೀವ್ ಗಾಂಧಿಯವರು ತಂದ ಸುಧಾರಣೆಗಳು ನವಭಾರತದ ಕಲ್ಪನೆಗೆ ಅಡಿಪಾಯಗಳಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜೀವ್ ಗಾಂಧಿಯವರ ಬಲಿದಾನದ ದಿನ ಅಂಗವಾಗಿ ಅವರು ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಸಮೃದ್ಧ, ಸಶಕ್ತ, ಆಧುನಿಕ ಭಾರತ ನಿರ್ಮಾಣದ ಕನಸು ಕಂಡು, ಆ ದಿಕ್ಕಿನಲ್ಲಿ ದೇಶವನ್ನು ಮುನ್ನಡೆಸಿದ ವೈಜ್ಞಾನಿಕ – ವೈಚಾರಿಕ ಚಿಂತನೆಯ ಮುತ್ಸದ್ದಿ ನಾಯಕ, ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಕನಸನ್ನು ನನಸಾಗಿಸುವ ಹೊಣೆ ನಮ್ಮೆಲ್ಲರದು ಎಂದು ಸಿಎಂ ಹೇಳಿದರು.
ನಂಬಿದ ಆದರ್ಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ನಾಯಕನನ್ನು ಅವರ ಬಲಿದಾನದ ದಿನ ಗೌರವದಿಂದ ನಮಿಸೋಣ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.