ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಲ ಕೇಳಿದರೆ ಚಪ್ಪಲಿ ಕಳ್ಳರಂತೆ ನೋಡುತ್ತಾರೆ ಇದು ತೆಲಂಗಾಣ ಕಾಂಗ್ರೆಸ್‌ಸರ್ಕಾರದ ಸಿಎಂ ರೇವಂತ್ ರೆಡ್ಡಿ ಅವರ ಹತಾಶೆಯ ಮಾತು ಎಂದು ಜೆಡಿಎಸ್ ದೂರಿದೆ.
ಕಾಂಗ್ರೆಸ್‌ಗ್ಯಾರಂಟಿಗಳು ಕಾಂಗ್ರೆಸ್‌ಆಡಳಿತವಿರುವ ಸರ್ಕಾರದ ಬುಡವನ್ನೇ ಅಲ್ಲಾಡಿಸುತ್ತಿದೆ ಎಂಬುದನ್ನು ತೆಲಂಗಾಣ ಸಿಎಂ ಒಪ್ಪಿಕೊಂಡಿದ್ದಾರೆ.
ತುಂಡು ತುಂಡು ಕತ್ತರಿಸಿದರೂ ಸಕಾಲಕ್ಕೆ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ನಮ್ಮ ಕೈಲಾಗುತ್ತಿಲ್ಲ. ತಿಂಗಳಿಗೆ 4,000 ಕೋಟಿ ರೂ. ಕೊರತೆ ಇದೆ ಎಂದು ಸರ್ಕಾರದ ದಿವಾಳಿತನವನ್ನು ಬಹಿರಂಗಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಹೊರಗೆ ಥಳುಕು, ಒಳಗೆ ಹುಳುಕು” ಇದು ನಮ್ಮ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅದಕ್ಷ ಆಡಳಿತ ಎಂದು ಜೆಡಿಎಸ್ ಟೀಕಿಸಿದೆ.
6 ತಿಂಗಳಿಂದ ಗೃಹಲಕ್ಷ್ಮಿ ಹಣವಿಲ್ಲ, ಅನ್ನಭಾಗ್ಯ ಅಕ್ಕಿ ದುಡ್ಡು ಕೊಟ್ಟಿಲ್ಲ. ಯುವನಿಧಿ ಕೇವಲ ಘೋಷಣೆ. ಗೃಹ ಜ್ಯೋತಿ ನೆಪ, ಸ್ಮಾರ್ಟ್‌ಮೀಟರ್‌ಹೆಸರಲ್ಲಿ ಸಾವಿರಾರು ಕೋಟಿ ಲೂಟಿ, ಹಿಮಾಚಲ, ತೆಲಂಗಾಣ ಕಾಂಗ್ರೆಸ್‌ಸರ್ಕಾರ ದಿವಾಳಿಯಾಗಿದೆ, ಮುಂದೆ ಸಿದ್ದರಾಮಯ್ಯನ ಭ್ರಷ್ಟ ಕಾಂಗ್ರೆಸ್‌ಸರ್ಕಾರದ ಸರದಿ ಎಂದು ಜೆಡಿಎಸ್ ಭವಿಷ್ಯ ನುಡಿದಿದೆ.