ಹೆಣ್ಣು ಮಕ್ಕಳು ಮಾನಸಿಕ ಹಾಗೂ ದೈಹಿಕ ಶೋಷಣೆಗೆ ಕಡಿವಾಣ-ಸಿಎಂ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಂದಿನ‌ ಆಧುನಿಕ‌ ಕಾಲಘಟ್ಟದಲ್ಲಿ ಕೂಡ ಹೆಣ್ಣು ಮಕ್ಕಳು ಮಾನಸಿಕ ಹಾಗೂ ದೈಹಿಕ ಶೋಷಣೆಗೊಳಪಟ್ಟು, ಸಮಾನ ಅವಕಾಶಗಳಿಂದ ವಂಚಿತರಾಗಿ ಬದುಕು ಸಾಗಿಸುತ್ತಿರುವುದು ನಮ್ಮೆಲ್ಲರನ್ನು ಆತ್ಮವಿಮರ್ಷೆಗೆ ಒಡ್ಡಿಕೊಳ್ಳಬೇಕಿರುವ ವಿಚಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಹೆಣ್ಣುಭ್ರೂಣ ಹತ್ಯೆ, ಬಾಲ್ಯವಿವಾಹ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಮುಂತಾದ ಪಿಡುಗುಗಳ ವಿರುದ್ಧ ಇಂದು ದನಿಯೆತ್ತದಿದ್ದರೆ ಮತ್ತೆಂದೂ ದನಿಯೆತ್ತಲು ಸಾಧ್ಯವಿಲ್ಲ.

- Advertisement - 

ಹೆಣ್ಣುಮಕ್ಕಳ‌ ಶಿಕ್ಷಣ, ಉದ್ಯೋಗ, ಘನತೆಯ ಬದುಕಿನ‌ ಕನಸಿಗೆ ಬೆಂಬಲವಾಗಿ ನಿಂತು, ಅವರನ್ನು ಸಮಾಜದ ಆಸ್ತಿಯಾಗಿ ಬದಲಿಸುವ ಹೊಣೆ ನಮ್ಮೆಲ್ಲರದು.

ಗ್ಯಾರಂಟಿ ಯೋಜನೆಗಳ ಮೂಲಕ‌ ನಮ್ಮ ರಾಜ್ಯದಲ್ಲಿ ಸ್ತ್ರೀಸಬಲೀಕರಣ ನವಯುಗ ಆರಂಭಗೊಂಡಿದೆ.‌ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳು ವಿಶ್ವಪ್ರಶಂಸೆಗೆ ಪಾತ್ರವಾಗಿವೆ ಎನ್ನುವುದು ಹೆಮ್ಮೆ.

- Advertisement - 

ಹೆಣ್ಣುಮಕ್ಕಳ ಸುರಕ್ಷತೆ ಮತ್ತು ಸಬಲೀಕರಣದ ಮೂಲಕ ಈ ದಿನವನ್ನು ಕರ್ನಾಟಕ ಅರ್ಥಪೂರ್ಣವಾಗಿ ಆಚರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

 

 

 

Share This Article
error: Content is protected !!
";