ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸದನ ನಡೆಯುತ್ತಿರುವಾಗಲೇ ಹನಿಟ್ರ್ಯಾಪ್‌ಬಾಂಬ್‌ಸಿಡಿಸಿದ ಕರ್ನಾಟಕ ಕಾಂಗ್ರೆಸ್ ಸಚಿವರು ಈಗ ಥಂಡಾ ಹೊಡೆದಿದ್ದಾರೆ. ಮಾನವನ್ನು ಪಣಕ್ಕಿಟ್ಟಾದರೂ ರಾಜಕೀಯದಲ್ಲಿ ಉಸಿರಾಡಬೇಕೆಂದು ನಿರ್ಧರಿಸಿರುವ ಕಾಂಗ್ರೆಸ್ಸಿಗರಿಗೆ ಕಾಂಗ್ರೆಸ್ಸಿಗರೇ ಸರಿಸಾಟಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಬಗ್ಗು ಬಡಿಯಲು ಸಿದ್ದರಾಮಯ್ಯ ಬಣ ಹನಿಟ್ರ್ಯಾಪ್‌ದಾಳ ಉರುಳಿಸಿದೆ. ಆ ಮೂಲಕ ಮಾನ ಹೋದರೂ ಪರವಾಗಿಲ್ಲ ಸಿಎಂ ಕುರ್ಚಿ ಬಿಡೆವು ಎಂಬ ಸ್ಪಷ್ಟ ಸಂದೇಶವನ್ನು ಸಿದ್ದರಾಮಯ್ಯ ಬಣ ರವಾನಿಸಿದೆ. ಕಾಂಗ್ರೆಸ್‌ಪಕ್ಷದೊಳಗಿನ ಕುರ್ಚಿ ಕಿತ್ತಾಟದ ಮುಂದುವರಿದ ಭಾಗವೇ ಹನಿಟ್ರ್ಯಾಪ್‌ಪ್ರಕರಣ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ ಎಂದು ಬಿಜೆಪಿ ಟಾಂಗ್ ನೀಡಿದೆ.
ರಾಜ್ಯ ನಿಸ್ತೇಜವಾಗಿದೆ, ಅಭಿವೃದ್ಧಿ ನಿಂತು ಹೋಗಿದೆ, ಗ್ಯಾರಂಟಿಗಳು ಕುಂಟುತ್ತಾ ಸಾಗುತ್ತಿದೆ, ಬರಗಾಲ ಆವರಿಸುತ್ತದೆ ಸರ್ಕಾರ ಮಾತ್ರ ಸಿಡಿ ಬಿಡುಗಡೆ ಕಾರ್ಯಕ್ರಮವನ್ನೇ ರಾಷ್ಟ್ರೀಯ ಯೋಜನೆ ಎಂಬ ರೀತಿಯಲ್ಲಿ ಪರಿಗಣಿಸಿರುವುದು ವಿಪರ್ಯಾಸ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.