ದೆಹಲಿ ಕರ್ನಾಟಕ ಸಂಘದ ಏಳಿಗೆಗೆ/ಉಳಿವಿಗೆ ಮತ್ತೊಮ್ಮೆ CMN

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೆಹಲಿ ಕರ್ನಾಟಕ ಸಂಘದ ಏಳಿಗೆಗೆ/ಉಳಿವಿಗೆ ಮತ್ತು ದೆಹಲಿ ಕನ್ನಡಿಗರ ಒಳಿತಿಗೆ ಮತ್ತೊಮ್ಮೆ CMN.

ಕರ್ನಾಟಕ ರಾಜ್ಯದ ಬಡ ರೈತನ ಮಗನಾದ ಸಿ.ಎಂ ನಾಗರಾಜ್ ಅವರು ಕೆಲಸ ಅರಸಿ ಬಂದಿದ್ದು ನವದೆಹಲಿಗೆ. ಆಗಿನ ಸಂದರ್ಭದಲ್ಲಿ ಕೇವಲ ಕನ್ನಡ ಪುಸ್ತಕಗಳನ್ನು ಓದುವ ಸಲುವಾಗಿ ದೆಹಲಿ ಕರ್ನಾಟಕ ಸಂಘದ ನಂಟನ್ನು ಅಂಟಿಸಿಕೊಂಡ ಸಿ.ಎಂ.ಎನ್ ಅವರು ಬರ ಬರುತ್ತಾ ಸಂಘದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾ ಯಾವುದೇ ಅಮ್ಮು ಬಿಮ್ಮು ತೋರದೆ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಸಂಘದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾರೆ.

- Advertisement - 

 ಸುವರ್ಣ ಕಮಲ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಬಸ್ತಿ ದಿನೇಶ್ ಶೆಣೈ ಅವರು ಒಮ್ಮೆ ಹೇಳಿದ್ದರು. ದೆಹಲಿ ಕರ್ನಾಟಕ ಸಂಘದಲ್ಲಿ ಅವರು ಫೋಟೋ ಗ್ರಾಫರ್ ಆಗಿದ್ದಾಗ ಸಿ.ಎಂ.ಎನ್ ಅವರ ಜೊತೆಗೆ ಒಳ್ಳೆಯ ಒಡನಾಟವಿತ್ತು. ಆಗ ಸಿ.ಎಂ.ಎನ್ ಅವರು ತಾವು ಯಾವುದೇ ಬಿಂಕ-ಬಿಗುಮಾನ ತೋರದೆ ಕೆಲವೊಮ್ಮೆ ಸಭಾಂಗಣದ ಸ್ಟೇಜ್ ಮೇಲಿನ ಕಸವನ್ನು ಗುಡಿಸಿದ್ದಾರೆ. ಅದನ್ನು ಪ್ರಶ್ನಿಸಿ ನಾನು ಕೇಳಿದಾಗ ಅಯ್ಯೋ ಇರಲಿ ಬಿಡಿ ಕೆಲಸಗಾರರು ಬರುವತ್ತಿಗೆ ಕಾರ್ಯಕ್ರಮ ಶುರುವಾಗುತ್ತದೆ ಎಂದು ಈ ರೀತಿಯ ಕಾರ್ಯಗಳನ್ನು ಮಾಡುತ್ತಾ ಸಿ.ಎಂ.ಎನ್ ಅವರು ಸಂಘದ ಚಟುವಟಿಕೆಗಳಲ್ಲಿ ತಮ್ಮ ತನು ಮನ ತೊಡಗಿಸಿಕೊಂಡು ಸೇವೆ ಮಾಡುತ್ತಾ ಬಂದಿದ್ದಾರೆ. ಮತ್ತು ಅವರ ಸೇವೆಯನ್ನು ಗುರುತಿಸಿ ದೆಹಲಿ ಕನ್ನಡಿಗರು ಅವರನ್ನು ಮತ್ತೆ ಮತ್ತೆ ಚುನಾವಣೆಯಲ್ಲಿ ಗೆಲ್ಲಿಸಿ ಎರಡು ಅವಧಿಗೆ ಸತತವಾಗಿ ಅಧ್ಯಕ್ಷರನ್ನಾಗಿ ಆರಿಸಿದ್ದಾರೆ. ಮತ್ತು ದಿನಾಂಕ 12/04/2026 ರಂದು ನೆಡೆಯುವ ಮತ್ತೊಂದು ಚುನಾವಣೆಯಲ್ಲೂ ಸಹ ಸಿ.ಎಂ ನಾಗರಾಜ್ ಅವರು ಗೆದ್ದೇ ಗೆಲ್ಲುತ್ತಾರೆಂಬ ವಿಶ್ವಾಸದಿಂದ ದೆಹಲಿ ಕನ್ನಡಿಗರು ಅವರಿಗೆ ಬೆಂಬಲವಾಗಿದ್ದಾರೆ. ಹಾಗೂ ಅವರೇ ಮತ್ತೊಮ್ಮೆ ಅಧ್ಯಕ್ಷರಾಗಲಿ ಎಂದು ಸಾಕಷ್ಟು ದೆಹಲಿ ಕನ್ನಡಿಗರು ಬಯಸುತ್ತಿದ್ದಾರೆ.

ದೆಹಲಿಯಲ್ಲಿ ಕನ್ನಡಿಗರ ಉಳಿವಿಗೆ ಮತ್ತು ಹಿಂದಿನ ಹಿರಿಯರು ಕನಸು ಕಂಡಂತೆ ದೆಹಲಿ ಸಂಘದ ಬೆಳವಣಿಗೆಗೆ ಹಾಗೂ ನಮ್ಮ ಕನ್ನಡ ಭಾಷೆಯು ರಾಷ್ಟ್ರ ರಾಜಧಾನಿಯಲ್ಲಿ ರಾರಾಜಿಸಲು ಮತ್ತೊಮ್ಮೆ ಇನ್ನೊಂದು ಅವಧಿಗೂ ಸಿ.ಎಂ ನಾಗರಾಜ್ ಅವರನ್ನು ಮತ್ತು ಅವರ ತಂಡವನ್ನು ಗೆಲ್ಲಿಸುವ ಅವಶ್ಯಕತೆ ಇದೆ ಏಕೆಂದರೆ ಅವರು ತುಂಬಾ ದೂರ ದೃಷ್ಟಿಯುಳ್ಳವರು ದೆಹಲಿ ಕನ್ನಡಿಗರಿಗಾಗಿ ಮಹತ್ತರ ಯೋಜನೆಗಳನ್ನು ತರುತ್ತಿದ್ದಾರೆ ಈಗಾಗಲೇ ಎರಡು ಅವಧಿಗೆ ಅಧ್ಯಕ್ಷರಾಗಿ ಸಮರ್ಥವಾಗಿ ಕೆಲಸವನ್ನು ಯೋಜನೆಗಳನ್ನು ಮಾಡಿ ಜನಮನ್ನಣೆ ಗಳಿಸಿದ್ದಾರೆ. ಅವರ ಆಳ್ವಿಕೆಯಲ್ಲಿ ದೆಹಲಿ ಕನ್ನಡ ಸಂಘವು ದೇಶ ವಿದೇಶಗಳಲ್ಲಿ ಹೆಸರು ಮಾಡಿದೆ. ಸಂಘದ ಅಮೃತ ಮಹೋತ್ಸವದ ಕಾರ್ಯಕ್ರಮಕ್ಕೆ ಮಾನ್ಯ ಪ್ರಧಾನ ಮಂತ್ರಿಗಳನ್ನು ಕರೆಸಿ ಸತತ ಎರಡು ಗಂಟೆ ಕಾಲ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿಕೆಗೆ ಮತ್ತು ಪ್ರಧಾನಿಯವರು ದೆಹಲಿ ಕರ್ನಾಟಕ ಸಂಘದ ಕಾರ್ಯವೈಖರಿಯ ಬಗ್ಗೆ ಸುಮಾರು 50 ನಿಮಿಷ ಸಮಯದ ತಮ್ಮ ಭಾಷಣದಲ್ಲಿ ಸಂಘವನ್ನು ಕೊಂಡಾಡುವಂತೆ ಮಾಡಿದ ಸಿ.ಎಂ ನಾಗರಾಜ್ ಅವರು ತಮ್ಮ ದಕ್ಷ ಅಧ್ಯಕ್ಷತೆಯಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.

- Advertisement - 

ಇಲ್ಲಿವರೆಗೂ ಪ್ರಧಾನಿಯವರು ಯಾವುದೇ ಒಂದು ಸಂಘ ಸಂಸ್ಥೆಗಳ ಕಾರ್ಯಕ್ರಮಕ್ಕೆ ಇಷ್ಟೊಂದು ಸಮಯ ಮೀಸಲಿಟ್ಟಿದ್ದು ಇತಿಹಾಸದಲ್ಲಿಲ್ಲ. ಅಂತಹ ಕಾರ್ಯಕ್ರಮವನ್ನು ರೂಪಿಸಿವಲ್ಲಿ ಪ್ರಧಾನಿಯವರ ತಂಡಕ್ಕೆ ಮಾಡಿದ ಮನವರಿಕೆಯಿಂದ ಮತ್ತು ಸಂಘದ ರೂಪುರೇಷೆಗಳ ಮಾಹಿತಿಯಿಂದ ಪ್ರಸನ್ನರಾದ ಪ್ರಧಾನಿಯವರ ಮನವೊಲಿಸಿ ಈ ಕಾರ್ಯಕ್ರಮ ಯಶಸ್ವಿ ಮಾಡಿಸಿದ್ದು ಅಧ್ಯಕ್ಷರ ಘನತೆಯನ್ನು ಬಹು ಪಾಲು ಹೆಚ್ಚಿಸಿದೆ ಎಂದರೆ ಅತಿಶಯವಾಗುವುದಿಲ್ಲ.

ಸಿ.ಎಂ ನಾಗರಾಜ್ ಅವರು ತಮ್ಮ ಅವಧಿಯಲ್ಲಿ ಕ್ರಿಯಾಶೀಲರಾಗಿ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ದೆಹಲಿ ಕನ್ನಡಿಗರ ಮನೆ ಮಾತಾಗಿದ್ದಾರೆ. ದೆಹಲಿಯ ಕನ್ನಡಿಗರಿಗೆ ಅನುಕೂಲವಾಗುವಂತೆ ಸಂಘದ ಸಭಾಂಗಣದ ಆಸನಗಳನ್ನು ಮೇಲ್ದರ್ಜೆಗೇರಿಸಿ ಹೊಸ ಧ್ವನಿ ವರ್ಧಕಗಳನ್ನು ಅಳವಡಿಸಿ ಒಂದು ಪಿವಿಆರ್ ಥಿಯೇಟರ್ ನಲ್ಲಿ ಕುಳಿತು ಸಿನಿಮಾ ನೋಡಿದಂತಹ ಅನುಭವ ಬರುವಂತೆ ಮಾಡಿದ್ದಾರೆ. ಸಂಸದೆ ಶ್ರೀಮತಿ ಸುಧಾ ಮೂರ್ತಿ ಅವರಿಂದ ಸರಿ ಸುಮಾರು 70 ಲಕ್ಷ ರೂಪಾಯಿ ಹಣವನ್ನು ದೇಣಿಗೆ ರೂಪದಲ್ಲಿ ಸಂಘಕ್ಕೆ ತಂದು ಸಂಘವನ್ನು ಆರ್ಥಿಕವಾಗಿ ಸದೃಢಗೊಳಿಸಿದ್ದಾರೆ. ಇನ್ನು ಅನೇಕ ಯೋಜನೆಗಳನ್ನು ಕಾರ್ಯಗತ ಮಾಡಿ ದೆಹಲಿಯಲ್ಲಿ ಕನ್ನಡಿಗರ ಅನುಕೂಲಕ್ಕೆ ಮತ್ತು ಮನರಂಜನೆಗೆ ಬೇಕಾಗುವಂತಹ ಹಲವಾರು ಯೋಜನೆಗಳನ್ನು ರೂಪಿಸಿ ಅನುಕೂಲಕರ ವಾತಾವರಣ ಸೃಷ್ಟಿಸಿ ಎಲ್ಲರ ವಿಶ್ವಾಸವನ್ನು ಗಳಿಸುವಲ್ಲಿ ಸಫಲರಾಗಿದ್ದಾರೆ.

ಸಿ.ಎಂ ನಾಗರಾಜ್ ಅವರ ಇಂತಹ ಉತ್ತಮ ಆಡಳಿತವನ್ನು ಕಂಡು ಹಲವಾರು ಹಿರಿಯರು ಗಣ್ಯರು ಅವರನ್ನು ತುಂಬಾ ಪ್ರಶಂಸೆ ಮಾಡಿದ್ದಾರೆ. ಏಕೆಂದರೆ ಅವರು ಯಾವುದೇ ಜಾತಿ ಮತ ಪ್ರಾಂತ್ಯದ ತಾರತಮ್ಯ ಮಾಡದೆ ಎಲ್ಲರನ್ನೂ ತಮ್ಮವರು ನಮ್ಮ ಕನ್ನಡಿಗರು ನನ್ನದು ಕನ್ನಡ ಜಾತಿ ಎಂಬ ಧ್ಯೇಯವನ್ನು ಶಿರಸಾ ಪಾಲಿಸಿ ಸಂಘದ ಬೆಳವಣಿಗೆಗೆ ಸಿ.ಎಂ ನಾಗರಾಜ್ ಅವರು ನಿಧಿ, ನಿಯತ್ತು ಮತ್ತು ನಿರ್ವಹಣೆ ಎಂಬುವ ಮೂರು ತತ್ವವನ್ನು ಪಾಲಿಸುತ್ತಾ ಸಂಘವನ್ನು ಮುನ್ನಡೆಸಿಕೊಂಡು ದೇಶ ರಾಜಧಾನಿಯಲ್ಲಿ ಕನ್ನಡದ ಹಿರಿಮೆ ಗರಿಮೆಯನ್ನು ಹೆಚ್ಚಿಸಿ ದೆಹಲಿ ಕನ್ನಡಿಗರಲ್ಲಿ ಕನ್ನಡದ ಕಂಪನ್ನು ಪಸರಿಸಿದ್ದಾರೆ.

ಕಳೆದ 11 ಮಂದಿ ಅಧ್ಯಕ್ಷರಗಳ ಕಾರ್ಯಕಾಲವನ್ನು ಹತ್ತಿರದಿಂದ ನೋಡಿರುವಂತಹ ಸಂಘದ ಹಿರಿಯರಾದ ತುಂಬಾ ಅನುಭವ ಇರುವ ಸರಹು ಕೃಷ್ಣ ಭಟ್ ಅವರು ಹೇಳುತ್ತಾರೆ ಸಂಘದ ಅಸ್ತಿತ್ವಕ್ಕಾಗಿ ಘನತೆಗಾಗಿ ಹೋರಾಡಿದ ಸಂಘವನ್ನು ಸಾಹಿತ್ಯಕವಾಗಿ ಸಾಂಸ್ಕೃತಿಕವಾಗಿ ಸದೃಢಗೊಳಿಸಿದ ಹಿರಿಯರ ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಸಂಘವನ್ನು ಆರ್ಥಿಕವಾಗಿ ಸದೃಢಗೊಳಿಸಿದ ಜನಾಕರ್ಷಣೀಯ ಕಾರ್ಯಕ್ರಮದ ಮೂಲಕ ಸಂಘವನ್ನು ವಿಶ್ವ ಭೂಪಟಕ್ಕೆ ತಂದ ಪ್ರಸ್ತುತ ಅಧ್ಯಕ್ಷರಾದ ಸಿ.ಎಂ ನಾಗರಾಜ್ ಅವರು ಪ್ರತ್ಯೇಕವಾಗಿ ಕಾಣುತ್ತಾರೆ. ಅಲ್ಲದೆ ಸಿ.ಎಂ ನಾಗರಾಜ್ ಅವರಿಗೆ ಇರುವ ಅನುಭವ ಹಾಗೂ ಸಂಘದ ಕುರಿತಾದ ಹಿಂದಿನ ಹಿರಿಯರ ಕಂಡ ಕನಸನ್ನು ಅವರ ನೇತೃತ್ವದಲ್ಲಿ ನನಸಾಗಿ ಮಾಡಬಲ್ಲರು ಎಂಬ ವಿಶ್ವಾಸ ಮೂಡಿಸುವಲ್ಲಿ ಸಿ.ಎಂ ನಾಗರಾಜ್ ಅವರು ಸಫಲರಾಗಿರುತ್ತಾರೆ ಎನ್ನುತ್ತಾರೆ ಹಿರಿಯರಾದ ಸರವು ಕೃಷ್ಣ ಭಟ್ಟ ಅವರು.

ನಮ್ಮ ನಾಡಿನಿಂದ ಬರುವ ಕನ್ನಡಿಗರಿಗೆ ದೇಶದ ರಾಜಧಾನಿ ದೆಹಲಿಯಲ್ಲಿ ಒಂದು ಸೇತುವೆಯಂತೆ ಆಧಾರಸ್ತಂಭವಾಗಿ ಎಲ್ಲರಿಗೂ ಸಹಾಯಹಸ್ತ ಚಾಚುವ ಸಿ.ಎಂ ನಾಗರಾಜ್ ಅವರು ದೆಹಲಿ ಕನ್ನಡಿಗರಿಗೆ ಒಳಿತಾಗುವಂತಹ ಹಲವು ಮಹತ್ವಕಾಂಕ್ಷೆಯ ಯೋಜನೆಗಳು ಅವರ ಪ್ರಣಾಳಿಕೆಯಲ್ಲಿವೆ. ಕೇವಲ ವರ್ತಮಾನವನದ ಬಗ್ಗೆ ಚಿಂತಿಸದೆ, ಸಂಘದ ಭವಿಷ್ಯದ ದೃಷ್ಟಿಯಿಂದ ಯುವಕರಿಗೆ ಉತ್ತಮ ಮಾರ್ಗದರ್ಶನ ನೀಡಿ ಐದಾರು ವರ್ಷ ತಮ್ಮ ಜೊತೆಯಲ್ಲಿಟ್ಟುಕೊಂಡು ಸಂಘದಲ್ಲಿ ಸೇವಾಮನೋಭಾವನೆಯನ್ನು ಕಲಿಸಿ ಈಗಿನ ಚುನಾವಣೆಯಲ್ಲಿ ಅವಕಾಶ ನೀಡುತ್ತಿರುವುದು ಅವರ ನಾಯಕತ್ವಗುಣಕ್ಕೆ ಮತ್ತೊಂದು ನಿದರ್ಶನ.

ಅದಕ್ಕಾಗಿ ಸಂಘದ ಭದ್ರಬುನಾದಿಗಾಗಿ ಸಂಘದ ಮುಂದಿನ ಭವಿಷ್ಯಕ್ಕಾಗಿ ಅವರ ಮುಂದಿನ ಯೋಜನೆಗಳು ನನಸಾಗಲು ಸಂಘದ ಏಳಿಗೆಗೆ ಮತ್ತು ಕನ್ನಡಿಗರ ಒಳಿತಿಗೆ ಸದಾ ಶ್ರಮಿಸುತ್ತಿರುವ ಸಿ.ಎಂ ನಾಗರಾಜ್ ಅವರು ಸೇರಿದಂತೆ ಇಡೀ ಅವರ ತಂಡವನ್ನು ಈ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆಲ್ಲಿಸುವ ಜವಾಬ್ದಾರಿ ದೆಹಲಿ ಕನ್ನಡಿಗರ ಮೇಲಿದೆ.
ಲೇಖನ:ವೆಂಕಟೇಶ ಹೆಚ್. ಬರಹಗಾರರು, ಚಿತ್ರದುರ್ಗ.

Share This Article
error: Content is protected !!
";