ಶಾಸಕ ರಘುಮೂರ್ತಿಯವರ ಪುತ್ರಿ ವಿವಾಹಕ್ಕೆ ಸಿಎಂ ಆಗಮನ, ಜಿಲ್ಲಾಧಿಕಾರಿ ಐಜಿಪಿ ಸ್ಥಳ ಪರಿಶೀಲನೆ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
 ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ, ರಾಜ್ಯಸಣ್ಣಕೈಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿಯವರ ಪುತ್ರಿ ಸುಚಿತ್ರ, ವರುಣರವರ ವಿವಾಹ ಮಹೋತ್ಸವ ಸೆ.೨೧ರಂದು ನಡೆಯಲಿದ್ದು, ಅಂದು ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವ ಹಿನ್ನೆಲೆಯಲ್ಲಿ ಹೆಲಿಪ್ಯಾಡ್ ಸ್ಥಳವನ್ನು ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಪೂರ್ವವಲಯ ಐಜಿಪಿ ರಮೇಶ್‌ಬಾನೋತ್, ಪರಿಶೀಲನೆನಡೆಸಿದರು.

ಸೋಮವಾರ ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ವೈಭವಪೂರಿತವಾಗಿ ನಡೆಯಲಿದ್ದು, ಈಗಾಗಲೇ ಸಿದ್ದತೆಗಳು ಬರದಿಂದ ಸಾಗಿದ್ದು, ವಿವಾಹ ಕಾರ್ಯಕ್ಕೆ ರಾಜ್ಯದ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಮಂತ್ರಿಮಂಡಲದ ಸಚಿವರು, ಶಾಸಕರು ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ವಧುವರರನ್ನು ಆಶೀರ್ವಾದಿಸಲಿದ್ದಾರೆ.

ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ  ಜಿಲ್ಲಾಧಿಕಾರಿಗಳು ಮತ್ತು ಪೂರ್ವವಲಯದ ಐಜಿಪಿ ನೇತೃತ್ವದಲ್ಲಿ ಬಂದೋಬಸ್ತ್ ಕಾರ್ಯಕ್ರಮವನ್ನು ವೀಕ್ಷಿಸಲಾಯಿತು.

ಚಿತ್ರದುರ್ಗ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಬಳಿ ಹೆಲಿಕಾಪ್ಟರ್ ನಿಲ್ದಾಣವನ್ನು ಸಿದ್ದಪಡಿಸಿಲು ಸ್ಥಳ ವೀಕ್ಷಣೆಯನ್ನು ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಪೂರ್ವವಲಯ ಐಜಿಪಿ ರಮೇಶ್‌ಬಾನೋತ್, ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಡಿವೈಎಸ್ಪಿ ಟಿ.ಬಿ.ರಾಜಣ್ಣ, ತಹಶೀಲ್ದಾರ್ ರೇಹಾನ್‌ಪಾಷ, ಲೋಕೋಪಯೋಗಿ ಎಇಇ ವಿಜಯಭಾಸ್ಕರ್ ವೀಕ್ಷಿಸಿದರು.

 

- Advertisement -  - Advertisement - 
Share This Article
error: Content is protected !!
";