ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾರ್ಯಕ್ರಮಕ್ಕೆ ಬನ್ನಿ ಎಂದು ಆಹ್ವಾನ ನೀಡಿದವರು ನರಿಗಳು, ಬಂದವರು ಕುರಿಗಳು ಎಂಬಂತಿದೆ ನಿಮ್ಮ ಲಜ್ಜೆಗೆಟ್ಟ ಸಮರ್ಥನೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಸಿಎಂ ಸಿದ್ದರಾಮಯ್ಯ – “ಈ ಐತಿಹಾಸಿಕ ಸಂಭ್ರಮದಲ್ಲಿ ನೀವು ಭಾಗಿಯಾಗಿ” ಎಂದು ಆಹ್ವಾನಿಸಿದರು. ಡಿಸಿಎಂ ಡಿ.ಕೆ ಶಿವಕುಮಾರ್ – “ಸಂಜೆ 4 ಗಂಟೆಗೆ ಸ್ಟೇಡಿಯಂಗೆ ಬನ್ನಿ” ಎಂದು ಮಾಧ್ಯಮಗಳ ಮೂಲಕ ಆಹ್ವಾನ ನೀಡಿದರು.
ರಾಜ್ಯ ಸರ್ಕಾರ ಯಾವುದೇ ಒಂದು ಕಾರ್ಯಕ್ರಮ ಆಯೋಜಿಸಬೇಕಾದರೆ ಗುಪ್ತಚರ ಇಲಾಖೆ ಮಾಹಿತಿ ಅನುಸರಿಸಿ ಅಗತ್ಯ ಪೂರ್ವಸಿದ್ಧತೆ, ಪೊಲೀಸ್ ಭದ್ರತೆ, ಜನಸಂದಣಿ ನಿರ್ವಹಣೆ ಮಾಡಬೇಕು ಎಂಬ ಕನಿಷ್ಠ ಜ್ಞಾನ ಇಲ್ಲವಾಯ್ತೇ ? 11 ಮುಗ್ಧ ಆರ್‌ಸಿಬಿ ಅಭಿಮಾನಿಗಳನ್ನು ಬಲಿ ಪಡೆದ ಮೇಲೂ ನಿಮ್ಮ ಸಮರ್ಥನೆ ಅಸಹ್ಯ ಹುಟ್ಟಿಸುತ್ತಿದೆ.
ಕರುನಾಡಿನ ಜನರು ಕರ್ನಾಟಕ ಕಾಂಗ್ರೆಸ್ ರ್ಕಾರದ ಈ ಮಹಾದುರಂತವನ್ನು ಎಂದಿಗೂ ಕ್ಷಮಿಸುವುದಿಲ್ಲ. ಭಂಡಬಾಳುಸಿದ್ದ ಎಂದು ಜೆಡಿಎಸ್ ತರಾಟೆ ತೆಗೆದುಕೊಂಡಿದೆ.