ಸಿಎಂ ಪತ್ನಿ ಪಾರ್ವತಮ್ಮ ಅವರಿಗೆ ಮತ್ತೊಂದು ಸಂಕಷ್ಟ

News Desk

ಚಂದ್ರವಳ್ಳಿ ನ್ಯೂಸ್, ಮೈಸೂರು:
ಸಿಎಂ ಕುಟುಂಬವನ್ನು ಬಿಟ್ಟು ಬಿಡದಂತೆ ಕಾಡುತ್ತಿರುವ ಕೆಸರೆ ಗ್ರಾಮದ ಜಮೀನು ಮತ್ತು 14 ನಿವೇಶನಗಳಿಂದಾಗಿ ಸಿದ್ದರಾಮಯ್ಯ ನಿದ್ದೆಗೆಟ್ಟಿದ್ದಾರೆ.

ಸಿಎಂ ಪತ್ನಿ ಪಾರ್ವತಮ್ಮ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಸಿಎಂ ಪತ್ನಿ ಹಾಗೂ ಸಿಎಂ ಭಾಮೈದ ಸೇರಿ ಒಟ್ಟು 10 ಜನರ ಮೇಲೆ ಈಗ ಮೈಸೂರಿನ ಸಿವಿಲ್ ನ್ಯಾಯಾಲಯದಲ್ಲಿ ಭೂ ವ್ಯಾಜ್ಯ ಸಂಬಂಧ ಪ್ರಕರಣ ದಾಖಲಾಗಿದೆ.

ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮಗೆ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ತವರಿನ ಉಡುಗೊರೆ ರೀತಿ ಕೊಟ್ಟ ಕೆಸರೆ ಗ್ರಾಮದ ಮೂರುವರೆ ಎಕರೆ ಜಮೀನಿಂದ ಈಗ ಕಾನೂನಿನ ದೊಡ್ಡ ಸಂಕಷ್ಟ ಸೃಷ್ಟಿಯಾಗಿದೆ. ಕಳೆದ 4 ತಿಂಗಳಿಂದ ರಾಜ್ಯ ರಾಜಕೀಯದಲ್ಲಿ ಇದೇ ಜಮೀನು ಹಾಗೂ ಜಮೀನಿನಿಂದ ಸಿಕ್ಕ ಪರಿಹಾರ ರೂಪದ 14 ಸೈಟ್‌ಗಳು ಬಿರುಗಾಳಿ ಎಬ್ಬಿಸಿತ್ತು. ಹಲವು ತನಿಖೆಗಳು ಇದರಿಂದ ನಡೆಯುತ್ತಿವೆ. ಈಗ ಈ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು ಪ್ರಕರಣದ ಮೂಲ ಭೂಮಿಯ ಬಗ್ಗೆಯೆ ಈಗ ವಿವಾದ ಹುಟ್ಟಿಕೊಂಡಿದೆ.

ಸಿಎಂ ಭಾಮೈದ ಮಲ್ಲಿಕಾರ್ಜುನ ಸ್ವಾಮಿಗೆ ದೇವರಾಜ್ ಕೆಸರೆ ಭಾಗದಲ್ಲಿ ಮೂರುವರೆ ಎಕರೆ ಜಮೀನು ಮಾರಿದ್ದರು. ಈಗ ಆ ಜಮೀನು ದೇವರಾಜ್‌ಅವರದ್ದಲ್ಲ. ಆ ಜಮೀನು ತಮ್ಮದ್ದು ಎಂದು ದೇವರಾಜ್ ಸಹೋದರ ಮೈಲಾರಯ್ಯನ ಮಗಳು ಜಮುನಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ನನ್ನ ಚಿಕ್ಕಪ್ಪ ದೇವರಾಜ್ ನಮಗೆ ಮೋಸ ಮಾಡಿದ್ದಾರೆ. ನನ್ನ ತಂದೆಯ ಪಾಲಿನ ಜಾಗವನ್ನು ಮೋಸದಿಂದ ಬರೆಸಿಕೊಂಡು ಈಗ ಬೇರೆಯವರಿಗೆ ಮಾರಿದ್ದಾರೆ. ನಮಗೆ ನ್ಯಾಯ ಬೇಕು ಹೀಗಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ.

ಖಾತೆ ಮಾಡಿಸಿಕೊಡುವ ಹೆಸರಿನಲ್ಲಿ ಸಹಿ ಪಡೆದು ಮೋಸ ಮಾಡಿದ್ದಾರೆ. ನಮಗೆ ಈ ಜಮೀನು ವಿಚಾರ ಮಾಧ್ಯಮದ ಮೂಲಕ ಗೊತ್ತಾಗಿದೆ. ಹೀಗಾಗಿ ಈಗ ಕೇಸ್ ಹಾಕಿದ್ದೇವೆ ಎಂದು ಮೈಲಾರಯ್ಯನ ಮಗಳು ಜಮುನಾ ಹೇಳಿದ್ದಾರೆ.
ಈ ಬಗ್ಗೆ ಜಮುನಾ ಸಹೋದರ ಮಂಜುನಾಥ್ ಸ್ವಾಮಿ ಕೂಡ ಪ್ರತಿಕ್ರಿಯಿಸಿದ್ದು
, ಚಿಕ್ಕಪ್ಪ ದೇವರಾಜ್ ನಮಗೆ ಮೋಸ ಮಾಡಿ ನಮ್ಮ ಜಮೀನನ್ನು ತಮ್ಮದ್ದು ಎಂದು ಮಾರಾಟ ಮಾಡಿದ್ದಾರೆ.

ಹೀಗಾಗಿ ನಾವು ತಮ್ಮ ಚಿಕ್ಕಪ್ಪ ದೇವರಾಜ್ ಸೇರಿದಂತೆ ಅವರು ಜಮೀನು ಮಾರಾಟ ಮಾಡಿರುವ ಸಿಎಂ ಭಾಮೈದ ಮಲ್ಲಿಕಾರ್ಜುನ ಸ್ವಾಮಿ, ಸಿಎಂ ಪತ್ನಿ ಪಾರ್ವತಮ್ಮ ಸಿದ್ದರಾಮಯ್ಯ ಸೇರಿದಂತೆ ಎಲ್ಲರ ಮೇಲೂ ಕೇಸ್ ಹಾಕಿದ್ದೇವೆ ಎಂದು ಹೇಳಿದ್ದಾರೆ.

ಖಾತೆ ಮಾಡಿಸಿ ಕೊಡುತ್ತೇನೆ ಎಂದು ಹೇಳಿ ನನ್ನ ಚಿಕ್ಕಪ್ಪ ಮೂವತ್ತು ವರ್ಷಗಳ ಹಿಂದೆ ನನ್ನ ಹಾಗೂ ನನ್ನ ತಾಯಿ ಬಳಿ ಸಹಿ ಮಾಡಿಸಿಕೊಂಡಿದ್ದರು. ಆ ಜಮೀನು ನನ್ನ ತಂದೆಗೆ ಭಾಗವಾಗಿ ಬಂದ ಪಿತ್ರಾರ್ಜಿತ ಆಸ್ತಿ. ಆ ಆಸ್ತಿಯನ್ನೆ ಮೋಸದಿಂದ ನನ್ನ ಚಿಕ್ಕಪ್ಪ ಪಡೆದು ಅದನ್ನು ಸಿಎಂ ಕುಟುಂಬಕ್ಕೆ ಮಾರಾಟ ಮಾಡಿದ್ದಾರೆ ಎಂದು ಹೇಳಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";