ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಜ್ಞಾನ ಸೌರಭ ವಿದ್ಯಾಸಂಸ್ಥೆ ಜ್ಞಾನ ಸೌರಭ ನವೋದಯ ಕೋಚಿಂಗ್ ಸೆಂಟರ್ ವತಿಯಿಂದ ನಾಲ್ಕು ಮತ್ತು ಐದನೆ ತರಗತಿ ವಿದ್ಯಾರ್ಥಿಗಳಿಗೆ ನವೋದಯ ಪರೀಕ್ಷೆಗೆ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಜ.೧೧ ರಂದು ಬೆಳಿಗ್ಗೆ ಹತ್ತು ಗಂಟೆಯಿಂದ ಡಿ.ಸಿ.ಸರ್ಕಲ್‌ನಲ್ಲಿರುವ ರೋಟರಿ ಶಾಲೆಯಲ್ಲಿ ತರಬೇತಿ ನೀಡಲಾಗುವುದು.
ಗಣಿತಶಾಸ್ತ್ರ, ಮಾನಸಿಕ ಸಾಮರ್ಥ್ಯ, ಇಂಗ್ಲಿಷ್ ವಿಷಯಗಳ ಕುರಿತು ತರಬೇತಿಯಿರುತ್ತದೆ. ಜ.೧೫ ರ ನಂತರ ರೆಗ್ಯುಲರ್ ಕ್ಲಾಸ್‌ಗಳು ಆರಂಭಗೊಳ್ಳುತ್ತದೆ.
ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ೬ ರಿಂದ ದ್ವಿತೀಯ ಪಿ.ಯು.ಸಿ.ವರೆಗೆ ಉಚಿತ ವಸತಿ ಸಹಿತ ಶಿಕ್ಷಣ, ಮಕ್ಕಳ ಬೌದ್ದಿಕ, ಮಾನಸಿಕ ಹಾಗೂ ಶೈಕ್ಷಣಿಕ ಅಭಿವೃದ್ದಿ
ಸ್ಪರ್ಧಾತ್ಮಕ ಜಗತ್ತಿಗೆ ಪೂರ್ವಭಾವಿ ತಯಾರಿ, ಶಾಲಾ ಪಠ್ಯಕ್ಕೂ ಪೂರಕ ಚಟುವಟಿಕೆಗಳು ತರಬೇತಿಯಿಂದಾಗುವ ಪ್ರಯೋಜನ.
ನವೋದಯ ಕೈಪಿಡಿಯನ್ನು ತರಬೇತಿಯಲ್ಲಿ ಉಚಿತವಾಗಿ ನೀಡಲಾಗುವುದು. ಮೊರಾರ್ಜಿ ದೇಸಾಯಿ, ಸೈನಿಕ್, ಆದರ್ಶ ಹಾಗೂ ಇನ್ನಿತರೆ ಶಾಲೆಗಳಿಗೂ ತರಬೇತಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ೭೨೦೪೩೧೮೫೩೮, ೭೦೧೯೩೯೪೭೦೧ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜ್ಞಾನಸೌರಭ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್ ತಿಳಿಸಿದ್ದಾರೆ.

