ಕಲೆಕ್ಷನ್‌ಅಧ್ಯಕ್ಷನ “ಪರ್ಸಂಟೇಜ್‌ಪುರಾಣ” 

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಲೆಕ್ಷನ್‌ಅಧ್ಯಕ್ಷನ “ಪರ್ಸಂಟೇಜ್‌ಪುರಾಣ”  “ಪರ್ಸೆಂಟೇಜ್‌ಗಿರಾಕಿ” ಎಂದು ಸ್ವತಃ ಕಾಂಗ್ರೆಸ್‌ವಕ್ತಾರರೇ, ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನ “ರೋಲ್‌ಕಾಲ್‌ಪುರಾಣ” ಬಿಚ್ಚಿಟ್ಟಿದ್ದಾರೆ ಎಂದು ಜೆಡಿಎಸ್ ತನ್ನ ಎಕ್ಸ್ ಖಾತೆಯಲ್ಲಿ ಆರೋಪಿಸಿದೆ.

ಬೆಂಗಳೂರಿನಲ್ಲಿ 15 ದಿನಗಳ ಕಾಲ ತೇಪೆ ಹಚ್ಚಿದ ರಸ್ತೆ ಗುಂಡಿಗಳು ಒಂದೇ ರಾತ್ರಿ ಸುರಿದ ಮಳೆಗೆ ಕೊಚ್ಚಿಹೋಗಿದೆ. 

ಬ್ರ್ಯಾಂಡ್‌ಬೆಂಗಳೂರು ಹೆಸರಲ್ಲಿ  ಮೇಯುತ್ತಿರುವ “ಕಲೆಕ್ಷನ್‌ಗಿರಾಕಿ”ಯ ಪರ್ಸಂಟೇಜ್‌ಅವ್ಯವಹಾರಕ್ಕೆ ಮತ್ತು ಕಳಪೆ ಕಾಮಗಾರಿಗೆ ಪ್ರತ್ಯಕ್ಷ ಸಾಕ್ಷಿ ! ಎಂದು ಜೆಡಿಎಸ್ ದೂರಿದೆ.

 ಅಂದ್ಹಾಗೆ.., ಕಿತ್ತುಹೋಗಿರುವ ರಸ್ತೆ ಗುಂಡಿಗಳನ್ನು ವೀಕ್ಷಿಸಲು ಗುಂಡುಹಾಕಿ ಸಿಟಿ ನೈಟ್‌ರೌಂಡ್ಸ್‌ಯಾವಾಗ ಮಾಡ್ತೀರಾ ..? ಎಂದು ಜೆಡಿಎಸ್ ವ್ಯಂಗ್ಯವಾಡಿದೆ.

 

 

- Advertisement -  - Advertisement -  - Advertisement - 
Share This Article
error: Content is protected !!
";