ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಏರೋಸ್ಪೇಸ್ ವಲಯಕ್ಕೆ ಮತ್ತಷ್ಟು ಬಲ ತುಂಬಿದ ಕಾಲಿನ್ಸ್! ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನ ದೇವನಹಳ್ಳಿಯಲ್ಲಿ ಕಾಲಿನ್ಸ್ ಏರೋಸ್ಪೇಸ್ ಕಂಪನಿಯ ವಿಶ್ವದರ್ಜೆಯ ಉತ್ಪಾದನಾ ಘಟಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಉದ್ಘಾಟಿಸಿದ್ದು ಸಂತಸ ತರಿಸಿದೆ.
26 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಈ ವಿಶ್ವ ದರ್ಜೆಯ ಘಟಕವು ಭಾರತದ ಪ್ರಮುಖ ಏರೋಸ್ಪೇಸ್, ವಾಯುಯಾನ ಮತ್ತು ಸುಧಾರಿತ ಉತ್ಪಾದನಾ ಕೇಂದ್ರವಾಗಿ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಮ್ಮ ಕೈಗಾರಿಕಾ ನೀತಿ 2025ರ ದೃಷ್ಟಿಕೋನಕ್ಕೆ ಹೊಂದಿಕೊಂಡ ಈ ಹೂಡಿಕೆ, ರಾಜ್ಯವನ್ನು ಹೈಟೆಕ್ ಕೈಗಾರಿಕೆಗಳ ಪ್ರಮುಖ ತಾಣವಾಗಿ ಮತ್ತೊಂದು ಹಂತಕ್ಕೆ ಏರಿಸಿದೆ.
ಕಾಲಿನ್ಸ್ ಏರೋಸ್ಪೇಸ್ ಮತ್ತು RTX ತಂಡದ ನಿರಂತರ ನಂಬಿಕೆ ಮತ್ತು ಪಾಲುದಾರಿಕೆಗೆ ಸಚಿವ ಎಂ.ಬಿ ಪಾಟೀಲ್ ಧನ್ಯವಾದಗಳನ್ನು ತಿಳಿಸಿದ್ದಾರೆ.

