ಮಾರುಕಟ್ಟೆಗೆ ಲಗ್ಗೆ ಇಟ್ಟ ಕಲರ್ ಕಲರ್ ಮಣ್ಣಿನ ಮಡಿಕೆಗಳು

News Desk

ಬಡವರ ಫ್ರೀಜ್ ಗೆ ಹೆಚ್ಚಿದ ಬೇಡಿಕೆ
ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್
, ಹಿರಿಯೂರು:
ಬೇಸಿಗೆ ಕಾಲ ಆರಂಭವಾಗಿದೆ. ಕಲ್ಲು, ಗುಡ್ಡ ಬೆಟ್ಟಗಳಿಂದ ಕೂಡಿದ ಕಲ್ಲಿನ ಕೋಟೆಯಲ್ಲಿ ಒಂದಿಷ್ಟು ಬಿಸಿಲು ಜಾಸ್ತಿ ಬೇರೆ. ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದೆ. ಮನೆಯಿಂದ ಹೊರ ಹೋಗಿ ಬಂದವರು ಕೂಡಲೇ ಫ್ರೀಜ್ ನೀರಿಗೆ ಕೈ ಹಾಕಿ ಕುಡಿಯುವುದು ಸಾಮಾನ್ಯ. ಇದರಿಂದ ಹಲವು ರೋಗಗಳನ್ನು ನಾವೇ ಆಹ್ವಾನ ಮಾಡಿಕೊಳ್ಳುತ್ತೇವೆ. ಆದರೆ ಫ್ರೀಜ್ ನೀರಿನ ಬದಲಿಗೆ ಮಣ್ಣಿನ ಮಡಿಕೆಯಲ್ಲಿ ಶೇಖರಿಸಿಟ್ಟ ಶುದ್ಧ ನೀರು ಆರೋಗ್ಯಕರ. ಹಾಗಾಗಿ ಪ್ರತಿಯೊಬ್ಬರೂ ಫ್ರೀಜ್ ನೀರಿನ ಬದಲಿಗೆ ಮಣ್ಣಿನ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರು ಕುಡಿಯುವುದು ಉತ್ತಮ.

ಬೇಸಗೆಯಲ್ಲಿ ಹೆಚ್ಚೆಚ್ಚು ನೀರು ಕುಡಿಯುವು ಸಾಮಾನ್ಯ. ಮಣ್ಣಿನ ಮಡಕೆಯಲ್ಲಿ ಇಟ್ಟ ನೀರು ತುಂಬಾ ಆರೋಗ್ಯಕರ. ಮಣ್ಣಿನ ಮಡಿಕೆಯಲ್ಲಿ ಶೇಖರಿಸಿಟ್ಟ ನೀರಿನಲ್ಲಿ ಯಾವುದೇ ವಿಷಕಾರಿ ಅಂಶವಿದ್ದರೂ ಮಣ್ಣಿನ ಪಾತ್ರೆ ಹೀರಿಕೊಳ್ಳುತ್ತದೆ. ನಮ್ಮ ಪೂರ್ವಿಕರು ಮಣ್ಣಿನ ಪಾತ್ರೆಗಳಿಂದ ಅಡುಗೆಗೆ ಮಾಡುತ್ತಿದ್ದರು.

ಅಲ್ಲದೆ ಪ್ರತಿ ಮನೆಗಳಲ್ಲೂ ಮಣ್ಣಿನ ಪಾತ್ರೆ(ಗುಡಾಣ)ಯಲ್ಲಿನ ನೀರು ಕುಡಿಯುತ್ತಿದ್ದರು. ಮಣ್ಣಿನ ಮಡಿಕೆಯಲ್ಲಿ ಬೇಯುವ ಆಹಾರ ಹೆಚ್ಚಿನ ಪೋಷಕಾಂಶಗಳನ್ನು ಉಳಿಸಿಕೊಳ್ಳಲಿದೆ. ಹಾಗಾಗಿ ಮಣ್ಣಿನ ಪಾತ್ರೆಯಲ್ಲಿನ ನೀರು ಸೇವಿಸಿ ಆರೋಗ್ಯದಿಂದ ಇರಬಹುದು.

ಅದೇ ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿಟ್ಟ ಪ್ರಿಡ್ಜ್ ನೀರು ಮನುಷ್ಯನ ಆರೋಗ್ಯದ ಮೇಲೆ ಹಲವು ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆ ಇರುತ್ತದೆ. ಬಾಟಲ್ ನೀರು ಕೂಡಾ ಅಪಾಯಕಾರಿ ಎಂದು ಪರೀಕ್ಷೆಗಳಿಂದ ತಿಳಿದು ಬಂದಿದೆ. ಇಂತಹ ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ತುಂಬಿಟ್ಟ ನೀರನ್ನು ಫ್ರೀಜ್ ನಲ್ಲಿಟ್ಟು ಕುಡಿಯುವುದು ಎಷ್ಟು ಸರಿ ಎನ್ನುವುದು ಪ್ರಶ್ನೆಯಾಗಿದೆ. ಮಣ್ಣಿನ ಮಡಿಕೆಯಲ್ಲಿರುವಂತಹ ವಿಟಮಿನ್ ಹಾಗೂ ಖನಿಜಾಂಶಗಳು ಪ್ಲಾಸ್ಟಿಕ್ ಬಾಟಲ್ ಗಳಲ್ಲಿರುವುದಿಲ್ಲ.

ಮಾರುಕಟ್ಟೆಗೆ ಕಲರ್ ಕಲರ್ ಬಡವರು ಫ್ರೀಜ್-
ಬಿಸಿಲಿನ ದಾಹಕ್ಕೆ ಎಷ್ಟು ನೀರು ಕುಡಿದರು ಸಾಲದು. ಫ್ರಿಡ್ಜ್ ನೀರು ಕುಡಿದರು ಬಾಯಾರಿಕೆ ದಾಹ ಕಡಿಮೆಯಾಗುವುದಿಲ್ಲ ಮಣ್ಣಿನ ಮಡಿಕೆ ನೀರು ಕುಡಿದರೆ ಹೋದ ಜೀವ ಬಂದಂತಾಗುತ್ತದೆ.

ಮಣ್ಣಿನ ಮಡಿಕೆ ಎಂದರೆ ಗ್ರಾಮೀಣ ಭಾಗದಲ್ಲಿ ಎಲ್ಲಿಲ್ಲದ ಬೇಡಿಕೆ. ಆದರೆ ಈಗ ನಗರ ಪ್ರದೇಶದ ಜನರು ಕೂಡ ಮಡಿಕೆಗಳನ್ನ ಖರೀದಿ ಮಾಡುತ್ತಿದ್ದಾರೆ.
ನಗರ ಪ್ರದೇಶದಲ್ಲಿ ಕೂಡ ಮಣ್ಣಿನ ಮಡಿಕೆಗಳಿಗೆ ಫುಲ್ ಡಿಮ್ಯಾಂಡ್ ಹೆಚ್ಚಾಗಿದೆ. ಇಷ್ಟು ದಿನ ಬರೀ ಒಂದೇ ಆಕಾರದಲ್ಲಿ ದೊರೆಯುತ್ತಿದ್ದು ಮಡಿಕೆಗಳು ಈಗ ಫುಲ್ ಮಾಡ್ರನ್ ರೂಪದಲ್ಲಿ ಸಿಗುತ್ತಿವೆ. ಬಿಸಿಲೆ ಹೆಚ್ಚಿದಂತೆ ಮಾಡ್ರನ್ ಮಣ್ಣಿನ ಮಡಿಕೆಗಳಿಗೆ ಡಿಮ್ಯಾಂಡ್ ಬಂದಿದೆ.

ಕಳೆದ ಕೇವಲ ದಿನಗಳಿಂದ ಸೂರ್ಯನ ತಾಪ ಹೆಚ್ಚಾಗಿದೆ ಬಿಸಿಲಿನ ತಾಪಕ್ಕೆ ಈಗ ಜನರು ತತ್ತರಿಸಿ ಹೋಗಿದ್ದಾರೆ. ಕೆಂಡದಂತಹ ಬಿಸಿಲಿಗೆ ಈಗ ಜನರು ನಲುಗಿ ಹೋಗಿದ್ದಾರೆ.

ಬಣ್ಣ ಬಣ್ಣದ ಚಿತ್ತಾರದಲ್ಲಿ ಕಂಗಳಿಸುತ್ತಿರುವ ಮಣ್ಣಿನ ಮಡಿಕೆಗಳು, ಅಪ್ಪುಟ ಸಂಪ್ರದಾಯಿಕ ಮಣ್ಣಿನ ಮಡಿಕೆಗಳು, ದೇಸಿ ಮಣ್ಣಿನಿಂದ ಗ್ರಾಮೀಣ ಭಾಗದಲ್ಲಿರುವ ಕುಂಬಾರರು ತಮ್ಮ ಕೈಯಿಂದ ಮಾಡಿದ ಮಾಡ್ರನ್ ಮಡಿಕೆಗಳು ಇಷ್ಟು ಒಂದೇ ಶೈಲಿಯಲ್ಲಿ ಮಣ್ಣಿನ ಮಡಿಕೆ ಮತ್ತು ಗಡಿಗೆಗಳನ್ನ ತಯಾರಿಸಲಾಗುತ್ತಿತ್ತು.

ಹೀಗಾಗಿ ಮಣ್ಣಿನ ಮಡಿಕೆಗಳು ಗ್ರಾಮೀಣ ಭಾಗಕ್ಕೆ ಸೀಮಿತವಾಗಿದ್ದವು.
ಆದರೆ ಕುಂಬಾರರು ಹೈಟೆಕ್ ಮಾದರಿಯಲ್ಲಿ ಹಲವು ಬಗೆಯ ಮಾದರಿಯಲ್ಲಿ ಮಣ್ಣಿನಿಂದ ತಯಾರಿಸಿದ ಪಾತ್ರೆಗಳನ್ನು ಸಿಟಿಯಲ್ಲೂ ಸಹ ಹೆಚ್ಚಾಗಿ ಬಳಕೆ ಮಾಡುತ್ತಿರುವುದರಿಂದ ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಹೆಚ್ಚಿದೆ.

ಬಿಸಿಲಿನ ತಾಪ ಹೆಚ್ಚಾಗಿದೆ ಹೀಗಾಗಿ ಬಡವರ ಫ್ರಿಡ್ಜ್ ಎಂದೆ ಖ್ಯಾತಿಯಾದ ಮಡಿಕೆಗಳನ್ನ ಖರೀದಿ ಮಾಡುತ್ತಿದ್ದೇವೆ. ಕಡಿಮೆ ದರಕ್ಕೆ ಸಿಗುವ ಜೊತೆ ಮಡಿಕೆಗಳಲ್ಲಿ ಸಂಗ್ರಹಿಸಿ ಇಟ್ಟಿದ್ದ ನೀರು ಸೇವನೆಗೆ ಆರೋಗ್ಯಕ್ಕೆ ಅನುಕೂಲವಾಗಲಿದೆ. ಇಂದಿನ ಮಾಡ್ರನ್ ಜನರೇಶನ್ ಗೆ ಅಪ್ಡೇಟ್ ಹಾಗಿರುವ ಕುಂಬಾರರು ತಮ್ಮ ಮಡಿಕೆ ಮಾಡುವ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ.

ಹೀಗಾಗಿ ಈ ಬಾರಿಯ ಬೇಸಿಗೆ ಸೀಸನ್ ನಲ್ಲಿ ಮಣ್ಣಿನಿಂದ ತಯಾರಿಸಿದ ಮಡಿಕೆ ಮಾತ್ರವಲ್ಲದೆ ಮಣ್ಣಿನ ವಾಟರ್ ಬಾಟಲ್ ಮಣ್ಣಿನಿಂದ ತಯಾರಿಸಿದ ನೀರಿನ ನೈಸರ್ಗಿಕ ಫಿಲ್ಟರ್ ಮಗ್ಗು ಹೀಗೆ ವಿವಿಧ ವೆರಿಟಿಯ ಮಣ್ಣಿನ ದಿನ ಬಳಕೆಯ ಸಾಮಾನುಗಳು ಮಾರುಕಟ್ಟೆಗೆ ಲೆಗ್ಗೆ ಇಟ್ಟಿವೆ. ಇಷ್ಟು ದಿನ ಬರೀ ಒಂದೇ ಶೈಲಿಯಲ್ಲಿ ಮಡಿಕೆ ಖರೀದಿಸುತ್ತಿದ್ದು ಮಂದಿ ಮಾಡ್ರನ್ ಮಡಿಕೆಗಳಿಗೆ ಫುಲ್ ಮಾರು ಹೋಗಿದ್ದಾರೆ.

ಮಾಡ್ರನ್ ಮಡಿಕೆಗಳನ್ನು ತಯಾರಿಸಿರುವ ಕುಂಬಾರರು ಖರ್ಚು ಮಾಡಿದ್ದಕ್ಕಿಂತ ದುಪ್ಪಟ್ಟು ಹಣವನ್ನು ಗಳಿಸಿದ್ದಾರೆ. ಈ ಮಾದರಿಯ ಮಡಿಕೆಗಳನ್ನು ತಯಾರಿಸಲು  ಅತ್ಯುತ್ತಮವಾದ ಮಣ್ಣನ್ನು ತರಿಸಿ ತಯಾರಿಸಿದ್ದಾರೆ.

ಒಟ್ಟಿನಲ್ಲಿ ಇಷ್ಟು ದಿನ ಬೇಸಿಗೆ ಸಮಯದಲ್ಲಿ ಒಂದೇ ಶೈಲಿಯ ಮಡಿಕೆಗಳನ್ನು ಖರೀದಿಸುತ್ತಿದ್ದ ಜನರು ಈ ಬಾರಿ ಕಲರ್ ಫುಲ್ ಮಣ್ಣಿನ ಮಡಿಕೆಗಳನ್ನು ಖರೀದಿ ಮಾಡಿ ಬೇಸಿಗೆಯಲ್ಲಿ ಮಡಿಕೆ ನೀರು ಕುಡಿದು ದೇಹ ತಂಪಾಗಿಸಿಕೊಳ್ಳುತ್ತಿದ್ದಾರೆ.

 

 

Share This Article
error: Content is protected !!
";