ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಂದೆಯಾ ಸಂಕ್ರಾಂತಿ
ಸಂಕಟ ಕಳೆಯೋ ಕ್ರಾಂತಿ(ಪ)
ಹೊಲದಲ್ಲಿ ರೈತ ಬೆವರು ಬಸಿಯೋ ಈತ ಹಸಿವೆಯಲ್ಲಿ
ಆಕಾಶವ ನೋಡುತ ಕವಿಯದ ಕಾರ್ಮೋಡದಲಿ
ಮಳೆ ಕರೆಯುತ ನಡುಗುತ
ಚಂದ ಮಾಮ ಕರೆಯುವನೆಂಬ
ತಂಪು ನಗುವ ಬೀರುತ
ಚುಕ್ಕಿಗಳ ಚಲ್ಲಾಟದಲಿ
ಕಷ್ಟವ ಕಾಲಲಿ ತುಳಿಯುತ
ಸೂರ್ಯನ ಸುಡು ಬಿಸಿಲಲಿ
ತಂಗಾಳಿಯ ಕರೆಯುತ(ಪ)
ದನ ಕರುಗಳ ಕಳೆದ ಕಾರಣ ಹುಡುಕುತ
ಬಂಡಿ ನೇಗಿಲು ಕುಂಟೆ ಕೊರಡು ಕಳೆದ ಕ್ಷಣಕೆ ಕಣ್ಣೀರು ಹಾಕುತ
ಕೂಲಿನಾಲಿ ಇಲ್ಲದೆ ಬೀದಿಪಾಲಾದ ಕೃಷಿ ಕೂಲಿಕಾರ್ಮಿಕರ ಹುಡುಕುತ ಹರಸುತ(ಪ)
ಎಳ್ಳು ಬೆಳೆಯೋ ರೈತರ
ಕಬ್ಬು ಕಡಿಯೋ ಕೂಲಿಕಾರರ ಬಂಡಿ ನಡೆಸೋ ಭಾರವಾದ ಹೃದಯವರ
ಕಬ್ಬು ಅರೆಯುವ ಕಾರ್ಖಾನೆ ಕಾರ್ಮಿಕರ ಬಾಯಿಗೆ ಎಳ್ಳು ಬೆಲ್ಲ ಹಾಕಲು (ಪ)
ಹಸಿವು ನೀಗುತ ಅಪಮಾನ
ಕಳೆಯುತ
ಜಾತಿ ಗೋಡೆಗಳ ಕುಟ್ಟಿ ಕೆಡುವುತ
ಧರ್ಮದ ಬೇಲಿ ಕಡಿಯುತ
ಸರ್ವಜನಾಂಗದ ಶಾಂತಿಯತೋಟವಾಗುತ(ಪ)
ಡಾ.ತಿಪ್ಪೇಸ್ವಾಮಿ ಕೆರೆಯಾಗಳಹಳ್ಳಿ, ಕನ್ನಡ ಉಪನ್ಯಾಸಕರು.