ಜಯದೇವ ಮಹಾಸ್ವಾಮಿಗಳ 150ನೇ ಜಯಂತ್ಯುತ್ಸವದ ಅಂಗವಾಗಿ ಸಂಸ್ಮರಣ ಗ್ರಂಥ ಶೀಘ್ರ..

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ಐತಿಹಾಸಿಕ ಮಹತ್ವದ ಬೆಳವಣಿಗೆಗೆ ಮತ್ತಷ್ಟು ಛಾಪು ಮೂಡಲು ತಮ್ಮ ಇಡೀ ಬದುಕನ್ನ ಸಮಾಜದ ಒಳಿತಿಗಾಗಿ ಮುಡುಪಾಗಿರಿಸಿ ಅವಿಶ್ರಾಂತವಾಗಿ ದುಡಿದ ಚಿತ್ರದುರ್ಗ ಶ್ರೀ ಜಗದ್ಗುರು ಮುರಘರಾಜೇಂದ್ರ ಬೃಹನ್ಮಠದ 24ನೇ ಪೀಠಾಧ್ಯಕ್ಷರಾಗಿ ಚಿತ್ರದುರ್ಗ ಕೇಂದ್ರವನ್ನಾಗಿರಿಸಿಕೊಂಡು ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ನಮ್ಮೊಂದಿಗೆ ಸದಾ ಇರುವ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತ್ಯುತ್ಸವದ ಅಂಗವಾಗಿ ಅವರ ಬಹುಮುಖಿ ಕಾರ್ಯಗಳ ಮೇಲೆ ಬೆಳಕು ಚೆಲುವ ಸಂಸ್ಮರಣ ಗ್ರಂಥ ಹೊರ ತರಲು ಶ್ರೀ ಮುರುಘಮಠದಲ್ಲಿಂದು

ಸೇರಿದ್ದ ವಿದ್ವಾಂಸರು, ಪ್ರಾಜ್ಞರು ಹಾಗೂ ಸ್ವಾಮೀಜಿಗಳವರು ಸೇರಿದ್ದ ಪ್ರಕಟಣಾ ಪೂರ್ವ ಸಮಾಲೋಚನಾ ಸಭೆಯಲ್ಲಿ ಗುರುಗಳ ವಿಚಾರವಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.ಬಹುಮುಖ್ಯವಾಗಿ ಜಯದೇವರ ಪೂರ್ವಾಶ್ರಮ, ಅವರ ಅಧ್ಯಯಕ್ಕೆ ಪ್ರೇರಣೆಯಾದ ಶಕ್ತಿಗಳ ಸ್ಮರಣೆ, ಚಿತ್ರದುರ್ಗದ ಪೀಠಾಧ್ಯಕ್ಷರಾದ ಬಗೆಗೆ ಸೇರಿದಂತೆ ಅವರು ಶ್ರೀಮಠದ ಮೂಲಕ ಸಮಾಜವನ್ನ ಪ್ರಭಾವಿಸಿದ  ಬಗೆಯನ್ನು ಸ್ವತಂತ್ರ ಕರ್ನಾಟಕ ವಿಶೇಷ 1949ರ ಲೇಖನಗಳು, ಸಂಚಯ ಪತ್ರಿಕೆ ವಿಶೇಷ  ಲೇಖನಗಳು, ಜಂಗಮ ಜ್ಯೋತಿ ಸ್ಮರಣ ಸಂಚಿಕೆಯಿಂದಾಯ್ದ ಲೇಖನಗಳು, ಹಳೆಯ ಪುಸ್ತಕಗಳಿಂದ ಗಮನಾರ್ಹ ಲೇಖನಗಳು, ಜಗದ್ಗುರುಗಳನ್ನು ಕುರಿತು ಬಂದಿರುವ ಕೃತಿಗಳು, ಇದರೊಂದಿಗೆ ಹೊಸ ಲೇಖನಗಳು, ಇತ್ತೀಚಿನ ವಿದ್ವಾಂಸರುಗಳು ಹಾಗೂ ಸ್ವಾಮಿಗಳವರ ಬರಹಗಳು, ಆಗಿನ ಕಾಲದ ಪತ್ರಗಳು, ಆಹ್ವಾನ ಪತ್ರಿಕೆಗಳು, ಕರಪತ್ರಗಳು, ದಿನಪತ್ರಿಕೆಗಳು ಮತ್ತು ಇತರ ದಾಖಲೆಗಳ ಸಂಗ್ರಹ. ಒಟ್ಟಾರೆಯಾಗಿ ಜಯದೇವರ ಇಡೀ ಜೀವನ ಸಾಧನೆಯ ಹೂರಣವನ್ನು  ಒಟ್ಟಾಗಿ ಸೇರಿಸಿ ಕಟ್ಟಿಕೊಡುವ ಪ್ರಯತ್ನ ಈ ಕೃತಿಯಲ್ಲಿದೆ ಎಂಬ ಆಶಯ ಸೇರಿದವರಿಂದ ವ್ಯಕ್ತವಾಯಿತು.

ಸಂಶೋಧಕರು, ಸಾಹಿತಿಗಳು, ಕವಿಗಳು ಸೇರಿದ್ದ ಈ ಸಭೆಯಲ್ಲಿ ತಮ್ಮದೇ ಆದ ವಿಭಿನ್ನ ಆಲೋಚನೆ ಮತ್ತು ಕೃತಿಯ ಸ್ವರೂಪ ಹೇಗಿರಬೇಕೆಂಬ ಆಶಯಕ್ಕೆ ತಕ್ಕಂತೆ ಕೃತಿ ಮತ್ತು ಅವರ ಜಯಂತ್ಯುತ್ಸವವೂ ಕೂಡ ಸ್ಮರಣೀಯ ಎನ್ನುವಂತಾಗಬೇಕೆಂಬ ಸದಾಶಯ ಶ್ರೀಜಗದ್ಗುರು ಮುರಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆ ಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿಯವರದು. ಹಾಗೆ ಇವರ ಜೊತೆಗೆ ದಾವಣಗೆರೆ ವಿರಕ್ತ ಮಠದ ಡಾ. ಬಸವಪ್ರಭು ಸ್ವಾಮಿಗಳ ಅವರ ಆಶಯವೂ ಅದೇ ಆಗಿದೆ.

ಇವರೊಂದಿಗೆ ಡಾ. ಮಲ್ಲಾಪುರಂ ಜಿ ವೆಂಕಟೇಶ್, ಡಾ. ಲಕ್ಷ್ಮಣ್ ತೆಲಗಾವಿ, ಡಾ. ಬಿ .ರಾಜಶೇಖರಪ್ಪ, ಡಾ  ಬಿ .ನಂಜುಂಡಸ್ವಾಮಿ, ಬೈರಮಂಗಲ ರಾಮೇಗೌಡ, ವೀರಸಾಬಿಹಳ್ಳಿ ಶಿವಣ್ಣ, ಹಿರಿಯ ಪತ್ರಕರ್ತ ಜಿ.ಎಸ್ .ಉಜ್ಜನಪ್ಪ, ಕೆ .ಎಲ್. ರಾಜಶೇಖರ್, ಗಿರಿಮಲ್ಲಣ್ಣನವರ್, ಸ್ವಾನ್ ಮುದ್ರಣಾಲಯದ ಕೃಷ್ಣಮೂರ್ತಿ ಹಾಗೂ ಎನ್. ತಿಪ್ಪಣ್ಣ ಮತ್ತಿತರರು ಭಾಗವಹಿಸಿದ್ದ ಸಭೆಗೆ ಸಂಸದರು, ವಿಜಯವಾಣಿ ದಿನಪತ್ರಿಕೆಯ ಸಂಸ್ಥಾಪಕ ವಿಜಯ ಸಂಕೇಶ್ವರ ಅವರು ಸಭೆಯಲ್ಲಿ ಭಾಗವಹಿಸಿ ಕೆಲವೊತ್ತು ಇದ್ದು ,ಸಭೆಯ ನಿರ್ಣಯಗಳಿಗೆ ಸಹಮತ ವ್ಯಕ್ತಪಡಿಸಿದರು. 

- Advertisement -  - Advertisement - 
Share This Article
error: Content is protected !!
";