ಆಸ್ತಿ ನೋಂದಣಿ ಕಾರ್ಯಗಳಿಗೆ ಯಾವುದೇ ಸಮಸ್ಯೆ ಇಲ್ಲ-ಆಯುಕ್ತ ಕೆ.ಎ. ದಯಾನಂದ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಿಜಿಸ್ಟ್ರೇಷನ್ ಕಾಯ್ದೆ 1908 ನಿಯಮ 22(8) ತಿದ್ದುಪಡಿ ವಿರೋಧಿಸಿ ಉಪನೋಂದಣಾಧಿಕಾರಿಗಳು ನೋಂದಣಿ ಸ್ಥಗಿತ ಗೊಳಿಸಿರುವುದಾಗಿ ಸೋಷಿಯಲ್ ಮೀಡಿಯಾ ಮತ್ತು ಮಾಧ್ಯಮಗಳಲ್ಲಿ ವರದಿಯಾಗಿದೆ.

ಅಕ್ಟೋಬರ್  21 ರಂದು ರಿಜಿಸ್ಟ್ರೇಷನ್ ಕಾಯ್ದೆ 1908 ನಿಯಮ 22(8) ತಿದ್ದುಪಡಿ ವಿರೋಧಿಸಿ ಐದಾರು ಉಪನೋಂದಣಾಧಿಕಾರಿಗಳು ನೋಂದಣಿಯನ್ನು ಕೆಲಕಾಲ ಸ್ಥಗಿತಗೊಳಿಸಿದ್ದು ಕಂಡುಬಂದಿರುತ್ತದೆ. ಆದರೆ ನಂತರ ಉಪನೋಂದಣಾಧಿಕಾರಿಗಳೊಂದಿಗೆ ಚರ್ಚಿಸಿ ನೋಂದಣಿ ಕಾರ್ಯ ಎಂದಿನಂತೆಯೇ ಮುಂದುವರೆಸಲು ಕ್ರಮವಹಿಸಲಾಗಿದೆ.

ಪ್ರಸ್ತುತ ಯಾವುದೇ ಸಮಸ್ಯೆ ಇರುವುದಿಲ್ಲ, ಯಾರೇ ನೋಂದಣಿ ಮಾಡಿಸಿಕೊಳ್ಳಬೇಕಾದವರು ನೋಂದಣಿ ಮಾಡಿಸಬಹುದಾಗಿರುತ್ತದೆ ಎಂದು ಬೆಂಗಳೂರು ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತ ಕೆ..ದಯಾನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

- Advertisement -  - Advertisement -  - Advertisement - 
Share This Article
error: Content is protected !!
";