ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರ ವ್ಯಾಪ್ತಿಯಲ್ಲಿ ಪ್ರತಿ ಶನಿವಾರ ಸ್ವಚ್ಛತಾ ಈ ಸೇವೆ ಕಾರ್ಯಕ್ರಮದಡಿ ನಡೆಸುವ ಸ್ವಚ್ಛತಾ ಕಾರ್ಯವನ್ನು ನಗರದ 27ನೇ ವಾರ್ಡಿನ ಸಾಯಿ ಗಾರ್ಡನ್ ಪಾರ್ಕ್ ನಲ್ಲಿ ಪೌರ ಕಾರ್ಮಿಕರು ಸಿಬ್ಬಂದಿ ವರ್ಗದವರು ಹಾಗೂ ಪೌರಾಯುಕ್ತ ಎ ವಾಸೀಂ ಸ್ವಚ್ಛತೆಗೆ ಕೈಜೋಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ವಾಸೀಂ, ಸಾರ್ವಜನಿಕರು, ಸಂಘ ಸಂಸ್ಥೆಗಳು, ಮಹಿಳಾ ಸಂಘಗಳು, ಶಾಲೆ ಕಾಲೇಜು ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುವುದರಿಂದ ನಗರದ ಪರಿಸರ ಮತ್ತು ಜನರ ಆರೋಗ್ಯವಂತರಾಗಲು ಸಾಧ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪೌರಕಾರ್ಮಿಕರು ಸ್ವಚ್ಛತೆಯಲ್ಲಿ ಮುಂದಾದಾಗ ಸಾರ್ವಜನಿಕರು ಸಹಕರಿಸಬೇಕಾಗುತ್ತದೆ. ಕಸವನ್ನು ಎಲ್ಲಂದರಲ್ಲೇ ಬಿಸಾಕುವುದು ಚರಂಡಿಗಳಿಗೆ ಕಸ ಹಾಕುವುದನ್ನು ಸಾರ್ವಜನಿಕರು ನೋಡಿದರೆ ಅಂತ ವ್ಯಕ್ತಿಗಳಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಪೌರಾಯುಕ್ತರು ತಿಳಿಸಿದರು.
ಪಾರ್ಕ್ ಮತ್ತು ವಾರ್ಡ್ಗಳು ಸ್ವಚ್ಛವಾಗಿದ್ದರೆ ವೃದ್ಧರು ಮತ್ತು ಮಕ್ಕಳು ಆಟ ಆಡಲು ವಾಕಿಂಗ್ ಮಾಡಲು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಕಸವನ್ನು ಎಲ್ಲಂದರಲ್ಲಿ ಹಾಕುವುದರಿಂದ ಹಂದಿ ನಾಯಿಗಳ ಕಾಟ ಹೆಚ್ಚಾಗುತ್ತದೆ. ಕಸವನ್ನು ಮನೆಯಲ್ಲೇ ಶೇಖರಣೆ ಮಾಡಿಕೊಂಡು ಹಸಿ ಒಣ ಕಸ ಬೇರ್ಪಡಿಸಿ ನಗರ ಸಭೆಯ ಕಸದ ವಾಹನಗಳಿಗೆ ಹಾಕಬೇಕು ಎಂದು ವಾಸೀಂ ಕರೆ ನೀಡಿದರು.
ನಗರದ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗುವುದು ಸಾರ್ವಜನಿಕರ ಸಂಘ ಸಂಸ್ಥೆಗಳ ಸಹಕಾರ ಬಹಳ ಮುಖ್ಯ ಎಂದು ಎ ವಾಸೀಂ ಹೇಳಿದರು.
ಸಾಯಿ ಗಾರ್ಡನ್ ಮೊಗ್ಗು ಹಾಗೂ ಮಲ್ಲಿಗೆ ಸಂಘದ ಬಡಾವಣೆಯ ಕ್ಷೇಮಾ ಅಭಿವೃದ್ದಿ ಸಂಘದ ವತಿಯಿಂದ ಪೌರಕಾರ್ಮಿಕರಿಗೆ ಸ್ವಚ್ಛತೆಗೆ ಪ್ರೋತ್ಸಾಹಿಸಿದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರು, ಪೌರಾಯುಕ್ತ ಎ ವಾಸೀಂ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಚೇತನಾ ಕುಮಾರಿ, ಮಾಜಿ ನಗರ ಸಭೆ ಉಪಾಧ್ಯಕ್ಷ ರವಿಚಂದ್ರ ನಾಯ್ಕ, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ್ ನಾಯಕ, ನಗರಸಭೆ ಆರೋಗ್ಯ ನಿರೀಕ್ಷಕರಾದ ಸಂಧ್ಯಾ, ಸುನಿಲ್ ಕುಮಾರ್, ಅಶೋಕ್, ಮಹಾಲಿಂಗಪ್ಪ, ನಯಾಜ್, ದಪೇದಾರ್ ದುರ್ಗೇಶ್ ಹಾಗೂ ಬಡಾವಣೆಯ ನಿವಾಸಿಗಳು ಇದ್ದರು.
“ನಗರಸಭೆ ವ್ಯಾಪ್ತಿಯ ಎಲ್ಲ ವಾರ್ಡ್ ಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸುವಂತೆ ಸಾರ್ವಜನಿಕರು ಸಂಘ ಸಂಸ್ಥೆಗಳು ಗಮನಕ್ಕೆ ತಂದಿದ್ದಾರೆ. ಸಿಸಿ ಕ್ಯಾಮೆರಾ ಅಳವಡಿಸುವುದರಿಂದ ಸಾಕಷ್ಟು ಅನುಕೂಲವಾಗುತ್ತದೆ.
ಸಾರ್ವಜನಿಕರು ಸಂಘ ಸಂಸ್ಥೆಗಳ ಬಹುದಿನಗಳ ಬೇಡಿಕೆಯಾಗಿದೆ. ಕ್ಯಾಮೆರಾ ಅಳವಡಿಸಿದರೆ ಪೊಲೀಸ್ ಇಲಾಖೆ ಮತ್ತು ನಗರ ಸಭೆಯವರಿಗೂ ರಾತ್ರಿ ಸಮಯದಲ್ಲಿ ಆಗುವ ಕಳ್ಳತನ ನಿಯಂತ್ರಣಕ್ಕೆ ಬರುವುದರ ಜೊತೆಯಲ್ಲಿ ರಸ್ತೆ ಬದಿ ಎಲ್ಲಂದರಲ್ಲೇ ಕಸ ಹಾಕುವುದನ್ನು ತಪ್ಪಿಸಬಹುದು ಮತ್ತು ಸಮಸ್ಯೆಗಳಿದ್ದರೆ ತಕ್ಷಣ ಇಲಾಖೆಗಳಿಗೆ ಸಹಕರಿಯಾಗುತ್ತದೆ”.
ಎ.ವಾಸೀಂ, ಪೌರಾಯುಕ್ತರು, ನಗರಸಭೆ, ಹಿರಿಯೂರು.

