ಬಿಜೆಪಿ‌ ಮುಖಂಡನ ವಿರುದ್ಧ ಇನ್ನೊಬ್ಬ ಗೃಹಿಣಿಯಿಂದ ಲೈಂಗಿಕ ದೌರ್ಜನ್ಯದ ದೂರು

khushihost

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ : ಬಿಜೆಪಿ ಎಸ್‌ಸಿ ಮೋರ್ಚಾದ ಉಸ್ತುವಾರಿಯಾಗಿದ್ದ ಮಂಜುನಾಥ್ ಚೆನ್ನಮುಂಬಾಪುರ ಅವರ ವಿರುದ್ಧ ಮತ್ತೋರ್ವ ಮಹಿಳೆ ದೂರು ದಾಖಲಿಸಿದ್ದಾರೆ. ಇವರು ಸಹ ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಮತ್ತು ಹಣ ಪಡೆದಿರುವ ಆರೋಪದ ಅಡಿ ಮಹಿಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

40 ವರ್ಷದ ಮಹಿಳೆಯೊಬ್ಬರಿಗೆ ಅಂಗನವಾಡಿ ಕೆಲಸ ಕೊಡಿಸುವುದಾಗಿ ಹತ್ತಿರವಾಗಿದ್ದ ಮಂಜುನಾಥ್ ನಂತರ ದೈಹಿಕ ಸಂಪರ್ಕ ಬೆಳೆಸಿ ಮದುವೆಯಾಗುವುದಾಗಿ ನಂಬಿಸಿದ್ದರು. ನಂತರ ಮಂಜುನಾಥ್ ಅವರು ಮದುವೆಯಾಗಿದ್ದಾಗ ತಿಳಿದು ಬಂದಿತ್ತು. ಇವರ ಮೊದಲ ಪತ್ನಿಯೂ ಮಹಿಳೆಯೊಂದಿಗೆ ಮಂಜುನಾಥ್ ಅವರು ಮದುವೆಯಾಗಲು ಒಪ್ಪಿಗೆ ನೀಡಿದ್ದರೂ ಸಹ ಮದುವೆಯಾಗದೆ 6 ಲಕ್ಷದ ವರೆಗೆ ಹಣ ಪಡೆದು ನಂತರ, ಕರೆ ಮಾಡಿದರೂ ಕರೆ ಸ್ವೀಕರಿಸದೆ ಇದ್ದಾಗ ಮನೆಗೆ ತೆರಳಿದಾಗ ಮಹಿಳೆಯ ಮೇಲೆ ನಡೆಸಿದ್ದ ಘಟನೆ ಸೆ.1 ರಂದು ನಡೆದಿತ್ತು.

ಈಗ 50 ವರ್ಷದ ಮಹಿಳೆಯೊಬ್ಬರು ಮಂಜುನಾಥ್ ಅವರಿಂದ ದೈಹಿಕ ಸಂಪರ್ಕ ಬೆಳೆಸಿ ನಂತರ ವಂಚನೆ ಮಾಡಿರುವ ಘಟನೆ ಕುರಿತು ಮಹಿಳಾ ಠಾಣೆಯಲ್ಲಿ ಎರಡನೇ ಎಫ್ಐಆರ್ ದಾಖಲಾಗಿದೆ. ನಾಗವೇಣಿ ಮತ್ತು ಆಶಾರವರಿಂದ ಎರಡು ಎಫ್ಐಆರ್ ದಾಖಲಾಗಿದೆ.

- Advertisement -  - Advertisement - 
Share This Article
error: Content is protected !!
";