ಪತ್ರಿಕಾ ವಿತರಕರ ಒಕ್ಕೂಟದ ಪದಾಧಿಕಾರಿಗಳ ರಚನೆ

WhatsApp
Telegram
Facebook
Twitter
LinkedIn

ಚಂದ್ರವಳ್ಳಿ ನ್ಯೂಸ್, ಭದ್ರಾವತಿ :
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಶಿವಮೊಗ್ಗ, ಜಿಲ್ಲಾ ಭದ್ರಾವತಿ ತಾಲೂಕು ಪತ್ರಿಕಾ ವಿತರಕರ ವತಿಯಿಂದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಹಾಗೂ ನಾಲ್ಕನೇ ರಾಜ್ಯ ಸಮ್ಮೇಳನದ ಪತ್ರಿಕೆ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು. ಭದ್ರಾವತಿ ನಗರದಲ್ಲಿ ಪತ್ರಿಕಾ ವಿತರಕರ ಒಕ್ಕೂಟದಿಂದ ಪತ್ರಿಕಾ ವಿತರಕರ ದಿನಾಚರಣೆ ಹಾಗೂ ಪತ್ರಿಕಾ ವಿತರಕರ ಒಕ್ಕೂಟದ ಪದಾಧಿಕಾರಿಗಳ ರಚನೆಯ ನಂತರ ಭದ್ರಾವತಿ ನಗರಸಭೆ ಆಯುಕ್ತರಾದ ಪ್ರಕಾಶ್.ಎಂ.ಚೆನ್ನಣ್ಣನವರ್ ಹಾಗೂ ನಗರಸಭಾ, ಉಪಾಧ್ಯಕ್ಷರಾದ ಮಣಿ, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ನಗರಸಭಾ ಸಿಇಒ ಸುಹಾಸಿನಿಯವರುಗಳಿಗೆ ರಾಜ್ಯ ಸಮ್ಮೇಳನಕ್ಕೆ ಪತ್ರಿಕೆ ನೀಡಲಾಯಿತು.

 

ನಂತರ ಸಭೆ ಸೇರಿ ಹೊಸದಾಗಿ ಭದ್ರಾವತಿ ತಾಲೂಕು ಘಟಕವನ್ನು ಜಿಲ್ಲಾಧ್ಯಕ್ಷರಾದ ಎನ್.ಮಾಲತೇಶ್, ಪ್ರಧಾನ ಕಾರ್ಯದರ್ಶಿಯಾದ ಮುಕ್ತಾರ್ ಅಹಮದ್ (ನಜೀರ್) ರವರ ಸಮ್ಮುಖದಲ್ಲಿ ನಿರ್ದೇಶಕರ ಮಂಡಳಿಯ ರಚನೆ ಮಾಡಲಾಯಿತು. ಹೊಸ ಕಾರ್ಯಕಾರಿ ಮಂಡಳಿಯಲ್ಲಿ ಅಧ್ಯಕ್ಷರಾಗಿ ಜಿ.ಐ.ಮಲ್ಲಿಕಾರ್ಜುನ್, ಉಪಾಧ್ಯಕ್ಷರಾಗಿ ಸೋಮಶೇಖರ್, ಕಾರ್ಯದರ್ಶಿಯಾಗಿ ಪರಶುರಾಮ್ ರಾವ್, ಸಹ ಕಾರ್ಯದರ್ಶಿಯಾಗಿ ಶಿವ ಮೂರ್ತಿ.ಈ, ಖಜಾಂಚಿಯಾಗಿ ಮಧು.ಟಿ, ನಿರ್ದೇಶಕರುಗಳಾಗಿ ಕೆಂಪೇಗೌಡ ಲೋಕೇಶ್.ಕೆ, ದೇವೇಂದ್ರಪ್ಪ, ಕೃಷ್ಣಮೂರ್ತಿಯವರುಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಭದ್ರಾವತಿಯ ವಿತರಕರಾದ ಜಗದೀಶ್, ಶಬ್ಬೀರ್ ಮುಂತಾದವರು ಪಾಲ್ಗೊಂಡಿದ್ದರು. ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಹೊಸದಾಗಿ ರಚನೆಯಾಗಿರುವ ಕಾರ್ಯಕ್ರಮ ಮಂಡಳಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.

Nagendra Chandravalli Reporter   About Us
For Feedback - [email protected]

LATEST Post

error: Content is protected !!
WhatsApp Icon Telegram Icon