ಜೆಸಿಟಿಯು ಮುಷ್ಕರಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಬೆಂಬಲ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಕನ್ನಡ ಜಾಗೃತ ಭವನದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜೆಸಿಟಿಯು ನೇತೃತ್ವದಲ್ಲಿ ಪ್ರಗತಿಪರ ಸಮಾನ ಮನಸ್ಕ ಸಂಘ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರ ಸಭೆಯನ್ನು ನಡೆಸಲಾಯಿತು.

 ಈ ಸಭೆಯಲ್ಲಿ ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕ ವರ್ಗದ ಗುಲಾಮಗಿರಿಯನ್ನು ಕಾನೂನು ಬದ್ಧಗೊಳಿಸುವ ಹುನ್ನಾರಗಳ ಕುರಿತು ಚರ್ಚಿಸಲಾಯಿತು.

 ಮೇ 20ರಂದು ಜೆಸಿಟಿಯು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದೆ, ಇದಕ್ಕೆ ಬೆಂಬಲವಾಗಿ ಸಂಯುಕ್ತ ಕಿಸಾನ್ ಮೋರ್ಚಾ ಎಸ್ ಕೆ ಎಂ ಬೆಂಬಲವಾಗಿ ನಿಂತಿದೆ, ರೈತರು ಕಾರ್ಮಿಕರು ತುಂಬಾ ಕಷ್ಟಪಟ್ಟು ತ್ಯಾಗ ಬಲಿದಾನಗಳಿಂದ ಪಡೆದುಕೊಂಡಿದ್ದ ಸಂವಿಧಾನ ಬದ್ಧ ಹಕ್ಕುಗಳನ್ನು ನಿರ್ನಾಮ ಮಾಡಿ ಆಧುನಿಕ ಗುಲಾಮಗಿರಿಗೆ ತಳ್ಳುವ ನಾಲ್ಕು ಸಂಹಿತೆಗಳನ್ನು ಜಾರಿ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಿವೆ ಇದನ್ನು ವಿರೋಧಿಸಿ

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಜೆಸಿಟಿಯು ನೇತೃತ್ವದಲ್ಲಿ ಮೇ 15ರಂದು ಪ್ರಚಾರ ಜಾಥಾ ಮತ್ತು ಮೇ 17ರಂದು ಬೈಕ್ ರ‌್ಯಾಲಿ ನಡೆಸಲು ಹಾಗೂ ಮೇ 20ರಂದು ಸಂಘಟಿತ, ಅಸಂಘಟಿತ, ಸ್ಕೀಮ್ ನಲ್ಲಿ ದುಡಿಯುವ ಎಲ್ಲಾ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ಬೆಂಗಳೂರಿನ ಟೌನ್ ಹಾಲ್ ಮುಂದೆ ಸೇರಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.

 ಅದೇ ದಿನ ಬೆಳಗ್ಗೆ ದೊಡ್ಡಬಳ್ಳಾಪುರದ ಡಿ ಕ್ರಾಸ್ ನಲ್ಲಿ ರೈತ ಸಂಘದ ನೇತೃತ್ವದಲ್ಲಿ ಸಿಪಿಐಎಂ, ಕೆ ಆರ್ ಎಸ್, ಕನ್ನಡ ಪಕ್ಷ, ಎಎಪಿ, ಸರ್ವೋದಯ ಜನಶಕ್ತಿ, ರೈತ ಸಂಘ  ಮತ್ತು ರೈತರು, ದಲಿತರು, ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ರಸ್ತೆ ತಡೆ ನಡೆಸಲು ತೀರ್ಮಾನಿಸಲಾಯಿತು.

 ಈ ಜಂಟಿ ಸಭೆಯಲ್ಲಿ ಜೆಸಿಟಿಯು ಜಿಲ್ಲಾ ಸಂಚಾಲಕರು ಮತ್ತು ಸಿಐಟಿಯು ಜಿಲ್ಲಾ ಉಪಾಧ್ಯಕ್ಷರು ಪಿಎ ವೆಂಕಟೇಶ್, ಕನ್ನಡ ಪಕ್ಷದ ಮುಖಂಡರಾದ ಸಂಜೀವ್ ನಾಯಕ್, ಮುನಿ ಪಾಪಯ್ಯ, ವೆಂಕಟೇಶ್, ಕೆ ಆರ್ ಎಸ್ ಪಕ್ಷದ ಬಿ ಶಿವಶಂಕರ್, ಎಚ್ ಎನ್ ವೇಣು, ಶ್ರೀನಿವಾಸ್ ಡಿ ಎಂ,

ಸಿಪಿಐಎಂ ಪಕ್ಷದ ಮುಖಂಡರಾದ ಆರ್ ಚಂದ್ರತೇಜಸ್ವಿ, ಎಸ್ ರುದ್ರರಾಧ್ಯ , ಜನಶಕ್ತಿ ರೈತ ಸಂಘದ ರಮೇಶ್ ಸಂಕ್ರಾಂತಿ, ಎಸ್ಸಿಲ್ಲಾರ್ ಕಾರ್ಮಿಕ ಸಂಘದ ಮುಖಂಡರಾದ ಜಯಣ್ಣ ಎನ್ ಸಿ, ಆನಂದ್ ಕುಮಾರ್, ಸಿಐಟಿಯು ಮುಖಂಡರಾದ ರೇಣುಕರಾಧ್ಯ, ಕೆ ಪಿ ಆರ್ ಎಸ್ ಮುಖಂಡರಾದ ಶಿವಲಿಂಗಯ್ಯ, ದಾಳಪ್ಪ,ಎಆರ್‌ಡಿಯು ಸಂಘದ ಮುಖಂಡರಾದ ಸಾಧಿಕ್ ಪಾಷ ಸೇರಿದಂತೆ ಈ ಮೇಲ್ಕಂಡ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.

 

Share This Article
error: Content is protected !!
";