ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಮೊಳಕಾಲ್ಮೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಚಿತ್ರದುರ್ಗದ ವೀರ ವನಿತೆ ಒನಕೆ ಓಬವ್ವ ಸ್ಟೇಡಿಯಂನಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾಲಯದ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ 14ನೇ ಅಥ್ಲೆಟಿಕ್ಸ್ ಕ್ರೀಡಾಕೂಟ ಮತ್ತು ದಾವಣಗೆರೆ ವಿಶ್ವವಿದ್ಯಾಲಯ ತಂಡದ ಆಯ್ಕೆ 2025-26ರ 124 ಕಾಲೇಜುಗಳು ಭಾಗವಹಿಸಿದ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ಒಟ್ಟು 50 ಅಂಕಗಳೊಂದಿಗೆ ದಾವಣಗೆರೆ ವಿಶ್ವವಿದ್ಯಾಲಯದ ಸಮಗ್ರ ಪ್ರಶಸ್ತಿ ಮತ್ತು ಮಹಿಳೆಯರ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ವಿಜೇತ ವಿದ್ಯಾರ್ಥಿಗಳನ್ನು ನಗರದ ಬಸ್ ನಿಲ್ದಾಣದಿಂದ ಕಾಲೇಜಿನವರೆಗೂ ಮೆರವಣಿಗೆ ಮೂಲಕ ಕರೆತಂದು ಶುಭಕೋರಲಾಯಿತು.
ಪ್ರಶಸ್ತಿ ಪಡೆದವರ ವಿವರ-
1) ಅಖಿಲಾ BCOM ತೃತೀಯ – 1500ಮೀ ಪ್ರಥಮ, 2) ಸಂತೋಷ್ – 10, 000 ಮೀ ಪ್ರಥಮ, ದರ್ಶನ್ – ದ್ವಿತೀಯ, 3) ಆಕಾಶ್ – ಹೈ ಜಂಪ್ – ದ್ವಿತೀಯ, 4) ಚಂದ್ರ ಕಲಾ- 10.000ಮೀ – ತೃತೀಯ, 5) 5 ಕೀ ಮೀ ನಡಿಗೆ – ಚಂದ್ರಿಕ – ಪ್ರಥಮ, ಶಿವಮ್ಮ – ದ್ವಿತೀಯ, 6) 20 ಕೀ ಮೀ ನಡಿಗೆ – ತಿಪ್ಪೇಶ್ – ದ್ವಿತೀಯ, ದರ್ಶನ್-ತೃತೀಯ, 7) ಶಾಂತಮ್ಮ – 800ಮೀ – ತೃತೀಯ,
8) ಮುರುಳಿ – ಟ್ರಿಪಲ್ ಜಂಪ್ – ತೃತೀಯ, 9) 400*100 ಮಹಿಳಾ ರಿಲೇ – ಪ್ರಥಮ- ಅಖಿಲಾ/ ಶಾಂತಮ್ಮ/ ಚಂದ್ರಕಲಾ/ ಗೀತಾಂಜಲಿ. 10) ತಿಪ್ಪೇಶ್ ಬಿ – 5000ಮೀ – ಪ್ರಥಮ,11) ಚಂದ್ರಕಲಾ – 5000ಮೀ – ತೃತೀಯ, 12) 21 ಕೀ ಮೀ ಹಾಫ್ ಮ್ಯಾರಥನ್ – ದರ್ಶನ್ – ಪ್ರಥಮ,
ಸಂತೋಷ್-ದ್ವಿತೀಯ, 13) 400*100 ಪುರುಷ ರಿಲೇ – ಪ್ರಥಮ- ದರ್ಶನ್/ಜೋಗೇಶ್/ಆಂಜನೇಯ/ತಿಪ್ಪೇಶ್.
ಒಟ್ಟು 23ಕ್ಕೂ ಅಧಿಕ ಪದಕಗಳನ್ನು ಗೆದ್ದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶಾಸಕರು ಮತ್ತು ಕಾಲೇಜು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಎನ್ ವೈ ಗೋಪಾಲ ಕೃಷ್ಣ ಹಾಗೂ ಸದಸ್ಯರು ಅಭಿನಂದನೆ ತಿಳಿಸಿದರು.
ಕಾಲೇಜಿನ ಪ್ರಾಂಶಪಾಲ ಲಿಂಗೇಶ್ವರ. ವೈ, ಕ್ರೀಡಾ ಸಂಚಾಲಕ ವಿಶ್ವರಾಜ್, ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.

