ಉಚಿತ ಆರೋಗ್ಯ ತಪಾಸಣಾ ಮೂಲಕ ಸಂಭ್ರಮಾಚಾರಣೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
 ಕೇವಲ ಕನ್ನಡ ನಾಡು ನುಡಿ ಜಲದ ಹೋರಾಟಗಳಿಗೆ ಸೀಮಿತವಾಗದೆ ನಿಸ್ವಾರ್ಥ ಸೇವಾ ಮನೋಭಾವದಿಂದ
  ನಿರಂತರ ವಿಶೇಷ ಕಾರ್ಯಕ್ರಮಗಳ ರೂಪಿಸುವ ಮೂಲಕ  ಸಾರ್ವಜನಿಕರಿಗೆ ಕೈಲಾದ ಸೇವೆಯನ್ನು ನಮ್ಮ ಸಮಿತಿ ಮಾಡುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ಸಂಸ್ಥಾಪಕರು, ಖ್ಯಾತ ವಕೀಲರು ಆದ ರವಿ ಮಾವಿನಕುಂಟೆ ತಿಳಿಸಿದರು.

 

 ನಿರಂತರ ಅನ್ನದಾಸೋಹ ಸಮಿತಿಯ ಸಹಾಯದೊಂದಿಗೆ ತಾಲೂಕಿನ ದರ್ಗಾ ಜೋಗಹಳ್ಳಿಯಲ್ಲಿ ಆಯೋಜನೆ ಮಾಡಲಾಗಿದ್ದ 76ನೇ ಗಣರಾಜ್ಯೋತ್ಸವ ಹಾಗೂ ಸಮಿತಿಯ 9ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಚಿಗುರು ಆಸ್ಪತ್ರೆಯ ಸಹಾಯದೊಂದಿಗೆ  ಇಂದು  ನಮ್ಮ ಸಂಘಟನೆಯ ವಾರ್ಷಿಕೋತ್ಸವ ಕಾರ್ಯಕ್ರಮವು  ವಿಶೇಷವಾಗಿ ಮೂಡಿಬಂದಿದೆ  ಬೃಹತ್ ಮಟ್ಟದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಿದ್ದು , 500ಕ್ಕೂ ಅಧಿಕ  ಜನರಿಗೆ ತಪಾಸಣೆಯ ಜೊತೆಗೆ  ಔಷಧಿಗಳನ್ನು ಉಚಿತವಾಗಿ ನೀಡುವ ವ್ಯವಸ್ಥೆಯನ್ನು ಕೂಡ ಮಾಡಿರುವುದು ಸಂತಸದ ವಿಷಯವಾಗಿದೆ.

 ಇಂದಿನ ಕಾರ್ಯಕ್ರಮವನ್ನು ವಿಶೇಷವಾಗಿ  ಪೌರಕಾರ್ಮಿಕರನ್ನು ಹಾಗೂ ಆಶಾ ಕಾರ್ಯಕರ್ತೆಯರನ್ನು  ಸನ್ಮಾನಿಸಿ ಗೌರವಿಸಲಾಗಿದೆ . ಕಾರ್ಯಕ್ರಮದಲ್ಲಿ ಪ್ರಮುಖವಾಗಿ  ನಿರಾಶ್ರಿತ ಕಡುಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗಿದೆ.ಸದಾ ವಿಶೇಷ ಸೇವೆಗಳನ್ನು ಸಲ್ಲಿಸುವ ಮೂಲಕ ಸಮಾಜಕ್ಕೆ ಮಾದರಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಸಮಿತಿಯ ಎಲ್ಲ ಸದಸ್ಯರಿಗೂ, ಹಾಗೂ  ನಮ್ಮ ಸಮಿತಿಯ ಎಲ್ಲಾ ಕಾರ್ಯಕ್ರಮಗಳಿಗೂ ಸದಾ ಬೆಂಬಲವಾಗಿ ಶ್ರಮಿಸುವ ಮಲ್ಲೇಶ್ ಅವರಿಗೆ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು.

 ದರ್ಗಾ ಜೋಗಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಶಿಕಲಾ ನಾಗರಾಜ್ ಮಾತನಾಡಿ ಗಣರಾಜ್ಯೋತ್ಸವ ದಿನಾಚರಣೆಯನ್ನು  ವಿಶೇಷವಾಗಿ ಸಾರ್ವಜನಿಕರಿಗೆ  ಬೃಹತ್ ಮಟ್ಟದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು  ಆಯೋಜನೆ ಮಾಡುವ ಮೂಲಕ  ಹಾಗೂ ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಿಸುವುದು ತಂದಿದೆ, ಇಂತಹ ಉನ್ನತ ಮಟ್ಟದ  ಕಾರ್ಯಕ್ರಮವನ್ನು ರೂಪಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುತ್ತಿರುವ ಮಲ್ಲೇಶ್ವರ ತಂಡಕ್ಕೆ ಶುಭವಾಗಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಆಶಾ ಕಾರ್ಯಕರ್ತೆಯರಾದ ರೇಣುಕಾ ಮತ್ತು ರತ್ನಮ್ಮ ಮಾತನಾಡಿ ಇಂತಹ ಕಾರ್ಯಕ್ರಮಗಳು ನಮ್ಮನ್ನು ಮತ್ತಷ್ಟು ಹೆಚ್ಚಿನ ಸೇವೆ ಸಲ್ಲಿಸಲು ಪ್ರೋತ್ಸಹಿಸುತ್ತವೆ, ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ಹಾಗೂ ಅನ್ನದಾಸೋಹ ಸಮಿತಿ ವತಿಯಿಂದ ನಡೆಯುವ ಇಂತಹ ಉತ್ತಮ ಕಾರ್ಯಗಳು ನಿತ್ಯ ನಿರಂತರ ಸಾಗಲಿ ಎಂದರು.

ಕಾರ್ಯಕ್ರಮದಲ್ಲಿ ಚಿಗುರು ಆಸ್ಪತ್ರೆಯ ಮಾಲೀಕ ನಾಗರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನಾಗರಾಜ್, ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಸುಬ್ರಮಣಿ, ಕಾರ್ಮಿಕ ಘಟಕದ ಅಧ್ಯಕ್ಷ ಆನಂದ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ,ತಾಲ್ಲೂಕು ಅಧ್ಯಕ್ಷ ಶ್ರೀರಾಮ್, ಗ್ರಾಮ ಪಂಚಾಯತಿ ಸದಸ್ಯರಾದ ರಂಗಸ್ವಾಮಿ, ಜೆ.ವೈ.ಮಲ್ಲಪ್ಪ, ತಾಲ್ಲೂಕು ಕಲಾವಿದರ ಸಂಘದ ಅಧ್ಯಕ್ಷ ಎ ಸಿ ಅಶೋಕ್ಮುಖಂಡರಾದ ಅನಿಲ್,ರಂಗಸ್ವಾಮಿ, ರುದ್ರೇಶ್.ಕೆ.ಸಿ, ಸವಿತಾ, ಯೋಗ ಗುರೂಜಿ ಕೃಷ್ಣಪ್ಪ ಹಾಗೂ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";