ಚಂದ್ರವಳ್ಳಿ ನ್ಯೂಸ್, ತುಮಕೂರು :
ಮಿಸ್ಟರ್‌ಸಿದ್ದರಾಮಯ್ಯ ಅವರೇ ನಿಮ್ಮ 60% ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್‌ಕೊಟ್ಟರೇ ಇಡೀ ರಾಜ್ಯವನ್ನೇ ಬೇಕಾದರೂ ಮಾರಿ ಬಿಡುತ್ತೀರಿ ಅಲ್ಲವೇ ಎಂದು ಜೆಡಿಎಸ್ ಖಾರವಾಗಿ ಪ್ರಶ್ನಿಸಿದೆ.
ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿಧಾಮ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು 23, ಫೆಬ್ರವರಿ 2024ರಂದು ನಿಮ್ಮ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೀರಿ.
ಆದರೆ, ಇಂದು ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ಪ್ರದೇಶದ 120 ಎಕರೆ ಭೂಮಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲು ಹುನ್ನಾರ ನಡೆಸಿದ್ದೀರಿ. ಗಣಿಗಾರಿಕೆಗಾಗಿ 17,200 ಮರಗಳನ್ನು ಕಡಿಯಬೇಕಾಗುತ್ತದೆ. ಇದರಿಂದ ಪರಿಸರ ನಾಶ, ಅರಣ್ಯ ನಾಶ ಆಗುವುದಿಲ್ಲವೇ ? ಎಂದು ಜೆಡಿಎಸ್ ಖಂಡಿಸಿದೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ನಿಮಗೆ ಆತ್ಮಸಾಕ್ಷಿ ಇದೆಯಾ ? ಕೇಂದ್ರದ ಉಕ್ಕು ಮತ್ತು ಬೃಹತ್‌ಕೈಗಾರಿಕೆ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರ ಮೇಲಿನ ದ್ವೇಷ ರಾಜಕಾರಣಕ್ಕೆ, ಅರಣ್ಯ ನಾಶದ ನೆಪವೊಡ್ಡಿ ಬಳ್ಳಾರಿ ಜಿಲ್ಲೆಯ ಸಂಡೂರಿನ ದೇವದಾರಿಯಲ್ಲಿ ಕುದುರೆಮುಖ ಅದಿರು ಕಂಪನಿ(KIOCL)ಯ ಕಾರ್ಯಾಚರಣೆಗೆ ತಡೆ ಒಡ್ಡಿರುವ ನೀವು, ಈಗ ಚಿಂಕಾರ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆಗೆ ರತ್ನಗಂಬಳಿ ಹಾಸಲು ಮುಂದಾಗಿದ್ದೀರಿ ಎಂದು ಜೆಡಿಎಸ್ ತರಾಟೆ ತೆಗೆದುಕೊಂಡಿದೆ.