ಎಸ್ಟಿಗೆ ಕುರುಬ ಸಮುದಾಯ ಸೇರಿಸುವ ಹುನ್ನೂರಕ್ಕೆ ಖಂಡನೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಪರಿಶಿಷ್ಟ ಪಂಗಡಕ್ಕೆ ಕುರುಬ ಸಮುದಾಯವನ್ನು ಸೇರಿಸುವ ಹುನ್ನೂರ ನಡೆಯುತ್ತಿರುವುದನ್ನು ಖಂಡಿಸಿ ಹಿರಿಯೂರು ತಾಲೂಕು ವಾಲ್ಮೀಕಿ ನಾಯಕ ಸಮಾಜ ಹಿರಿಯೂರು ತಹಸೀಲ್ದಾರ ಸಿದ್ದೇಶ್ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವಜಾತಿ ಅಭಿಮಾನದಿಂದ ಪರಿಶಿಷ್ಟ ಪಂಗಡ ಎಸ್ ಟಿ

ಸಮುದಾಯಕ್ಕೆ ಕುರುಬ ಸಮುದಾಯವನ್ನು ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಹುನ್ನೂರ ಮಾಡುತ್ತಿರುವುದು ಎಷ್ಟು ಸರಿ ವಾಲ್ಮೀಕಿ ಸಮುದಾಯಕ್ಕೆ ವಿದ್ಯಾರ್ಥಿಗಳಿಗೆ ದೊಡ್ಡ ಅನ್ಯಾಯವಾಗುತ್ತದೆ

- Advertisement - 

ಸರ್ಕಾರ ರಚನೆಗೆ ವಾಲ್ಮೀಕಿ ಸಮುದಾಯದ ಪಾತ್ರವು ನಿರ್ಣಾಯಕ ಸಚಿವರು ಅನುವಾರಿಯಂಬುದನ್ನು ಮರೆತು ಈ ರೀತಿ ಮಾಡುವುದು ದೊಡ್ಡ ಅಪರಾಧ ಎಂದು ಸಂಘದಿಂದ ಆರೋಪ ಮಾಡಿದ್ದಾರೆ.

ಮುಂದೊಂದು ದಿನ ನಮ್ಮ ಸಮುದಾಯ ತಕ್ಕ ಪಾಠ ಕಲಿಸುತ್ತದೆ. ನಮ್ಮ ಸಮುದಾಯದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದೇವೆ.

- Advertisement - 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವನ್ನು ಕ್ರಿಶ್ಚಿಯನ್ ಪದ ಸೇರಿಸುವುದನ್ನು ಕೈ ಬಿಡಬೇಕೆಂದು ಹಿರಿಯೂರು ತಾಲೂಕು ವಾಲ್ಮೀಕಿ ಸಮುದಾಯ ಆಗ್ರಹಪಸುತ್ತವೆ.

ಈ ಸಂದರ್ಭದಲ್ಲಿ ಜೆ.ಬಿ.ರಾಜು, ಮಾಳಿಗೆ ಮಂಜುನಾಥ್,ಸೊಂಡೆಕೆರೆ ಶಿವಣ್ಣ, ಶಿವಪ್ಪ ನಾಯಕ, ಕೃಷ್ಣಪ್ಪ,ಬಸವರಾಜ್ ನಾಯಕ, ವಿಶ್ವನಾಥ್, ರಾಮಾಂಜನೇಯ, ಕುಮಾರ್, ನಾಗರಾಜ್, ತಿಪ್ಪೇಸ್ವಾಮಿ, ನರಸಿಂಹಮೂರ್ತಿ, ಪ್ರಜ್ವಲ್, ಮಂಜುನಾಥ್, ಶರತ್, ರಮೇಶ್, ಇದ್ದರು.

 

Share This Article
error: Content is protected !!
";