ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ವಿಕಾಸಸೌಧದಲ್ಲಿರುವ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಕಚೇರಿಯ ಸಲಕರಣೆ ಜಪ್ತಿಗೆ ಕಲಬುರಗಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.
ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕೊತನಹಿಪ್ಪರಗಾ ಗ್ರಾಮದಲ್ಲಿ ಭೂಸ್ವಾಧೀನ ಪಡಿಸಿಕೊಂಡು ರೈತರಿಗೆ ಪರಿಹಾರ ನೀಡದಿರುವ ಪ್ರಕರಣದಲ್ಲಿ ವಿಕಾಸಸೌಧದಲ್ಲಿರುವ ರಾಜ್ಯ ಮುಖ್ಯ ನೀರಾವರಿ ಇಲಾಖೆಯ ಕಾರ್ಯದರ್ಶಿ ಕಚೇರಿಯ ಪೀಠೋಪಕರಣಗಳ ಜಪ್ತಿ ಮಾಡುವಂರೆ ಕೋರ್ಟ್ ಆದೇಶಿಸಿದೆ.
ಹೀಗಾಗಿ ರೈತ ಸಿದ್ದಪ್ಪ ಬಸಪ್ಪ ಪೂಜಾರಿ ಸಮ್ಮುಖದಲ್ಲಿ ಕೋರ್ಟ್ ಅದೇಶ ಅನ್ವಯ ಕಚೇರಿಯ ಸಲಕರಣೆಗಳನ್ನು ಜಪ್ತಿ ಮಾಡಿದ್ದಾರೆ.ಸಂತ್ರಸ್ತ ರೈತ ಸಿದ್ದಪ್ಪ ಬಸಪ್ಪ ಪೂಜಾರಿ ಎನ್ನುವರು ಜಪ್ತಿ ವಾರೆಂಟ್ ಪಡೆದುಕೊಂಡು ಬಂದು ವಿಕಾಸಸೌಧದಲ್ಲಿರುವ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಕಚೇರಿ ಯಲ್ಲಿ ಸಾಮಾನುಗಳನ್ನು ಜಪ್ತಿ ಮಾಡಿದ್ದಾರೆ. 13 ಕುರ್ಚಿ, 4 ಕಂಪ್ಯೂಟರ್, 4 ಜೆರಾಕ್ಸ್ ಮಷಿನ್ಗಳನ್ನು ಜಪ್ತಿ ಮಾಡಲಾಗಿದೆ.
ಎನ್.ಎಸ್ ಬೋಸರಾಜು ಸಚಿವರಾಗಿರುವ ಸಣ್ಣ ನೀರಾವರಿ ಇಲಾಖೆ, 2013 ರಿಂದಲೂ ಭೂ ಸ್ವಾಧೀನ ಪರಿಹಾರ ಬಾಕಿ ಉಳಿಸಿಕೊಂಡಿದೆ. ಇಲಾಖೆಯಲ್ಲಿ ಹಣ ಇಲ್ಲ ಎಂದು ಸಚಿವರು, ಕಾರ್ಯದರ್ಶಿ ಸಬೂಬು ಹೇಳುತ್ತಿದ್ದಾರೆ. ಇದೀಗ ಸಣ್ಣ ನೀರಾವರಿ ಕಾರ್ಯದರ್ಶಿ ರಾಘವನ್ ಕಚೇರಿಯ ಉಪಕರಣಗಳ ಜಪ್ತಿ ಮಾಡಲಾಗಿದೆ.
ಹೊಸ ಕೆರೆ ನಿರ್ಮಾಣಕ್ಕಾಗಿ ಸಣ್ಣ ನೀರಾವರಿ ಇಲಾಖೆಯು ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕೊತನಹಿಪ್ಪರಗಾ ಗ್ರಾಮದಲ್ಲಿ ರೈತರ ಜ,ಮೀನು ಭೂಸ್ವಾದೀನ ಮಾಡಿಕೊಂಡಿತ್ತು. ಆದ್ರೆ, ನೀರಾವರಿ ಇಲಾಖೆ, ಎಂಟು ವರ್ಷದ ಹಿಂದೆ ರೈತರಿಗೆ ಅಲ್ಪ ಪರಿಹಾರ ನೀಡಿ ಸುಮ್ಮನಾಗಿತ್ತು.
ಇನ್ನುಳಿದ ಪರಿಹಾರಕ್ಕಾಗಿ ನೂರಾರು ರೈತರು ಪಟ್ಟು ಹಿಡಿದಿದ್ದರು. ಆದರೂ ಇಲಾಖೆ ಸ್ಪಂದಿಸಿಲ್ಲ. ಕೊನೆಗೆ ರೈತರು ಕೋರ್ಟ್ ಮೆಟ್ಟಿಲೇರಿದ್ದರು. ರೈತರ ಅರ್ಜಿ ವಿಚಾರಣೆ ನಡೆಸಿದ ಕಲಬುರಗಿ ಜಿಲ್ಲಾ ಕೋರ್ಟ್, ಇಲಾಖೆಯ ಕಾರ್ಯದರ್ಶಿ ಕಚೇರಿಯ ಪೀಠೋಪಕರಣಗಳ ಜಪ್ತಿ ಮಾಡುವಂತೆ ಹೇಳಿ ಆದೇಶ ಹೊರಡಿಸಿದೆ.