ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
2025ನೇ ಸಾಲಿನ ಉಣ್ಣೆ ಕಂಬಳಿ ನೇಯ್ಗೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಪಡೆದ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿ ಗ್ರಾಮದ ಕೆ.ಎಂ.ಬಜ್ಜಪ್ಪ ತಂದೆ ಗಿಡ್ಡ ಮಲ್ಲಪ್ಪ,
ರೇಷ್ಮೆ ನೇಯ್ಗೆಯಲ್ಲಿ ದ್ವೀತಿಯ ಸ್ಥಾನ ಪಡೆದ ಮೊಳಕಲ್ಮೂರಿನ ಸುರೇಶ್ ಡಿ.ಎಸ್. ತಂದೆ ಸಿದ್ದಪ್ಪ.ಬಿ, ಪ್ರಶಂಸನಾ ಪತ್ರ ಪಡೆದ ಡಿ.ಎಸ್. ಮಂಜುನಾಥ ತಂದೆ ಡಿ.ಜಿ. ಶಿವಮೂರ್ತಿ ಅವರಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ.
ಇದೇ ವೇಳೆ ಸಮಸ್ತ ನೇಕಾರಿಗೂ ಆಗಸ್ಟ್ 07 ಗುರುವಾರದಂದು ಆಚರಿಸುವ 11ನೇಯ ರಾಷ್ಟ್ರೀಯ ಕೈಮಗ್ಗ ನೇಕಾರರ ದಿನಾಚರಣೆ ಆಚರಣೆ ಶುಭಕೋರಿದ್ದಾರೆ.

