ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಹೊರ ವಲಯದಲ್ಲಿರುವ ಮಾದ ಗೊಂಡನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ದಿಂದ ಎಂ.ಎ ಇತಿಹಾಸ ವಿಭಾಗದಲ್ಲಿ
ಮೂರನೆ ಸ್ಥಾನ ಪಡೆದ ಎಸ್. ಎಸ್.ಸರಿತಾ ಐದನೆ ಸ್ಥಾನ ಪಡೆದ ರೋಜಾ.ಬಿ. ಹಾಗೂ ಬಿ. ಎ. ವಿಭಾಗದಲ್ಲಿ ಐದನೆ ಸ್ಥಾನ ಪಡೆದ ಭವ್ಯ. ಬಿ. ರವರುಗಳನ್ನ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಸಹಾಯ ಧನದ ಚೆಕ್ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್. ವಿ ಪ್ರಾಂಶುಪಾಲ ಡಾ.ಸದಾಶಿವ ರಾಮಚಂದ್ರ ಗೌಡ, ಪ್ರಾದ್ಯಾಪಕ ಶ್ರೀನಿವಾಸ್, ಸಂಘದ ಪ್ರಧಾನ ಕಾರ್ಯದರ್ಶಿ ವಸಂತ್, ಖಜಾಂಚಿ ಮಹೇಶ್, ನಿರ್ದೇಶಕರು ಗಳಾದ ಮಂಜುನಾಥ್, ರಾಜೇಂದ್ರ ಸ್ವಾಮಿ, ನಾಗರಾಜ್ ಉಪಸ್ಥಿತರಿದ್ದರು.