TAPMCS ಚುನಾವಣೆ ನಾಮಪತ್ರ ಹಿಂಪಡೆದ ಕಾಂಗ್ರೆಸ್ ಬೆಂಬಲಿತ  ಅಭ್ಯರ್ಥಿ ರಂಗಪ್ಪ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕು ವ್ಯವಸಾಯೋತ್ಪನ್ನ ಸಹಕಾರಿ ಸಂಘದ ಚುನಾವಣೆಯ ಕಾರಣಕ್ಕಾಗಿ ಕೆಲ ಜೆಡಿಎಸ್ ಪ್ರಮುಖರ ಜೊತೆಗೂಡಿ  ಕಾಂಗ್ರೆಸ್ ನಾಯಕರು ಮತಯಾಚನೆ ಮಾಡುತ್ತಿದ್ದು , ದೊಡ್ಡಬಳ್ಳಾಪುರ ಕಾಂಗ್ರೆಸ್ ನಾಯಕರ ಈ ನಡೆಯನ್ನು ಖಂಡಿಸಿ ತೂಬಗೆರೆ ಹೋಬಳಿಯಿಂದ ತಾಲ್ಲೂಕಿನ TAPMCS  ಚುನಾವಣೆಗೆ ಸ್ಪರ್ದಿಸಿದ್ದ ರಂಗಪ್ಪ ತಮ್ಮ ನಾಮಪತ್ರ ಹಿಂಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಮಪತ್ರ ಹಿಂಪಡೆದ ನಂತರ ನಗರದ ಪ್ರವಾಸಿ ಮಂದಿರದಲ್ಲಿ ಮಧ್ಯಮಗಳೊಂದಿಗೆ  ಕಾಂಗ್ರೆಸ್ ಬೆಂಬಲಿತ  ಅಭ್ಯರ್ಥಿ ರಂಗಪ್ಪ  ಮಾತನಾಡಿ ತಾಲ್ಲೂಕಿನ ಕಾಂಗ್ರೆಸ್ ನಾಯಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಜೆಡಿಎಸ್ ಜೊತೆಗೂಡಿ ಮತಯಾಚನೆ ಮಾಡುತ್ತಿದ್ದಾರೆ. ಆದರೆ ಮುಂದಿನ ಸ್ಥಳೀಯ ಚುನಾವಣೆಗಳಲ್ಲಿ  ನಾವು ಜೆಡಿಎಸ್ ವಿರುದ್ಧವೇ ಸ್ಪರ್ದಿಸಿ ಮತ ಕೇಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಸ್ಥಳೀಯ ಮುಖಂಡರ ಗಮನಕ್ಕೆ ತರದೆ, ಚರ್ಚಿಸದೆ ಏಕಪಕ್ಷೀಯವಾಗಿ ಪಕ್ಷದ ಪ್ರಮುಖರು  ನಿರ್ಧಾರ ಕೈಗೊಳ್ಳುತ್ತಿದ್ದಾರೆ.ಈ ವಿಚಾರವಾಗಿ ನಮ್ಮ ಹೋಬಳಿ ಕಾಂಗ್ರೆಸ್ ಮುಖಂಡರ ಸಲಹೆ ಮೇರೆಗೆ ಇಂದು ನಾವು ಟಿಎಪಿಎಂಸಿಎಸ್ ಚುನಾವಣೆಗೆ ಸ್ಪರ್ದಿಸಲು ಸಲ್ಲಿಸಿದ್ದ ನಮ್ಮ ನಾಮಪತ್ರವನ್ನು ಹಿಂಪಡೆದಿದ್ದೇವೆ ಎಂದು ತಿಳಿಸಿದರು.

- Advertisement - 

ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಸಿದ್ದಪ್ಪ ಮಾತನಾಡಿ ಸ್ಥಳೀಯವಾಗಿ  ನಮ್ಮ ಕಾಂಗ್ರೆಸ್ ಮುಖಂಡರಿಗೆ ದೊಡ್ಡಬಳ್ಳಾಪುರ ಕಾಂಗ್ರೆಸ್ ನಾಯಕರು ಮಾನ್ಯತೆ ನೀಡದೆ ಜೆಡಿಎಸ್ ಒಟ್ಟಿಗೆ ಮತ ಕೇಳುತ್ತಿರುವುದು ಸೂಕ್ತವಲ್ಲ. ನಮ್ಮ ಹೋಬಳಿಯಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದು,

ಈಗಾಗಲೇ ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರಿ ಸಂಘದ ಚುನಾವಣೆಯಲ್ಲಿ ಅನುಭವ ಹೊಂದಿರುವ ರಂಗಪ್ಪ ಅವರಿಗೆ ಅಧ್ಯಕ್ಷ ಸ್ಥಾನ ಕೊಡುವಲ್ಲಿ ತಾಲ್ಲೂಕು ಮಟ್ಟದ ನಾಯಕರು  ವಂಚಿಸಿದ್ದಾರೆ. ಈ ಬಾರಿಯಾದರೂ ನೀಡುತ್ತಾರೆ ಎಂದು ಭಾವಿಸಿದ್ದೆವು.ಆದರೆ ಚುನಾವಣೆ ಮೊದಲೇ ಜೆಡಿಎಸ್ ಜೊತೆ ಮತ ಕೇಳುವ ಮೂಲಕ ಅಧ್ಯಕ್ಷ ಸ್ಥಾನ ಕೈ ತಪ್ಪುವ  ಸಂದೇಶ ನೀಡಿದ್ದಾರೆ ಎಂದರು.

- Advertisement - 

ಈ ಸಂದರ್ಭದಲ್ಲಿ , ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಪ್ರಾಧಿಕಾರದ ಸದಸ್ಯರಾದ ಆರ್ ವಿ ಮಹೇಶ್, ಮುಖಂಡರಾದ ಶ್ರೀಧರ್, ಗೋಪಾಲ್ ನಾಯಕ್, ಮುರಳಿ, ಸವಿತಾ ಆನಂದ್, ಆರ್ ವಿ ಶಿವಕುಮಾರ್ ತೂಬಗೆರೆ ಹೋಬಳಿಯ ಹಲವು ಮುಖಂಡರು ಹಾಜರಿದ್ದರು.

 

Share This Article
error: Content is protected !!
";