ಬಾಂಗ್ಲಾ ನುಸುಳುಕೋರರನ್ನು ಕಾಂಗ್ರೆಸ್​ ಮತ ಬ್ಯಾಂಕ್ ಎಂದು ಪರಿಗಣಿಸಿದೆ-ಅಮಿತ್ ಶಾ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೋರ್ಡುವಾ:
ಅಸ್ಸೋಂನ ಜನರಿಗೆ
, ಸಂಸ್ಕೃತಿ, ಭೂಮಿ ಮತ್ತು ಅಸ್ತಿತ್ವಕ್ಕೆ ಬೆದರಿಕೆಯಾಗಿರುವ ಬಾಂಗ್ಲಾದೇಶದ ನುಸುಳುಕೋರರನ್ನು ಕಾಂಗ್ರೆಸ್​ ಮತ ಬ್ಯಾಂಕ್​ ಎಂದು ಪರಿಗಣಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​​ ಶಾ ಅವರು ವಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಅಸ್ಸೋಂ ರಾಜ್ಯದ ಪ್ರವಾಸ ಕೈಗೊಂಡಿರುವ ಅಮಿತ್​ ಶಾ, ನಾಗಾಂವ್ ಜಿಲ್ಲೆಯ ವೈಷ್ಣವ ಸಂತ ಶ್ರೀಮಂತ ಶಂಕರದೇವ ಅವರ ಜನ್ಮಸ್ಥಳವಾದ ಬಟದ್ರವ ಥಾನ್‌ನ 227 ಕೋಟಿ ರೂ.ಗಳ ಪುನರಾಭಿವೃದ್ಧಿ ಯೋಜನೆಗೆ ಚಾಲನೆ ನೀಡಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದರು.

- Advertisement - 

ಮುಂದುವರೆದು ಮಾತನಾಡಿದ ಅವರು, ಅಸ್ಸೋಂನಿಂದ ಮಾತ್ರವಲ್ಲದೆ ಭಾರತದ ಉಳಿದ ಭಾಗಗಳಿಂದಲೂ ನೆರೆಯ ದೇಶಗಳ ಎಲ್ಲಾ ಅಕ್ರಮ ವಲಸಿಗರನ್ನು ಕೇಂದ್ರವು ಗುರುತಿಸುತ್ತದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಕೇವಲ ಅಸ್ಸೋಂ ಜನರ ಸಾಂಸ್ಕೃತಿಕ ಗುರುತಿನ ರಕ್ಷಣೆ ಭರವಸೆ ಮಾತ್ರ ನೀಡುವುದಿಲ್ಲ. ಬದಲಾಗಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಕಡೆ ಗಮನಹರಿಸಿದ್ದಾರೆ ಎಂದು ಅಮಿತ್ ಶಾ ಹೇಳಿದರು.

- Advertisement - 

ಈ ವೇಳೆ ಶ್ರೀಮಾತಾ ಶಂಕರದೇವರ ಜನ್ಮಸ್ಥಳವನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ರಾಜ್ಯ ಸರ್ಕಾರವು ಬಾಂಗ್ಲಾದೇಶಿ ನುಸುಳುಕೋರರಿಂದ 1 ಲಕ್ಷಕ್ಕೂ ಹೆಚ್ಚು ಬಿಘಾ ಭೂಮಿಯನ್ನು ಮುಕ್ತಗೊಳಿಸಿದ್ದಾರೆ ಎಂದು ಶಾ ತಿಳಿಸಿದರು.

ಮತ್ತೆ ಐದು ವರ್ಷ ಬಿಜೆಪಿಗೆ ಅಧಿಕಾರ ಸಿಕ್ಕಲ್ಲಿ ಅಸ್ಸಾಂ ಅನ್ನು ನುಸುಳುಕೋರ ಮುಕ್ತವಾಗಿಸಲಾಗುವುದು ಎಂದು ಭರವಸೆ ನೀಡಿದ ಅವರು, ಅಸ್ಸಾಂನಲ್ಲಿ ಬಾಂಗ್ಲಾದೇಶ ನುಸುಳುಕೋರರನ್ನು ಮಾತ್ರವಲ್ಲದೇ ಭಾರತದೆಲ್ಲೆಡೆ ನುಸುಳುಕೋರರನ್ನು ಪತ್ತೆ ಮಾಡುತ್ತೇವೆ ಎಂದು ಅಮಿತ್ ಶಾ ಹೇಳಿದರು. ಶಂಕರದೇವ ಅವರು ಒಂದು ಭಾರತ ಎಂದು ಕರೆದರು. ಅದನ್ನೇ ಪ್ರಧಾನಿ ಮುಂದುವರೆಸಿದ್ದಾರೆ. ಕಳೆದ 11 ವರ್ಷದಲ್ಲಿ ಬಿಜೆಪಿ ಸರ್ಕಾರ ರಾಜ್ಯದ ವಿವಿಧ ಉಗ್ರಗಾಮಿ ಸಂಘಟನೆಗಳೊಂದಿಗೆ ಶಾಂತಿ ಒಪ್ಪಂದಗಳಿಗೆ ಸಹಿ ಹಾಕಿದೆ. ಈ ಒಪ್ಪಂದಗಳ ಶೇಕಡ 92 ರಷ್ಟು ಷರತ್ತುಗಳನ್ನು ಪೂರೈಸಲಾಗಿದೆ ಎಂದು ಅವರು ತಿಳಿಸಿದರು.

ಬಟದ್ರವ ಥಾನ್‌ನ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮಹತ್ವ ಕುರಿತು ಮಾತನಾಡಿದ ಅವರು, ಇದು ಅಸ್ಸಾಮಿ ಸಮಾಜದಲ್ಲಿ ಏಕತೆ ಮತ್ತು ಸಾಮರಸ್ಯದ ಸಂಕೇತವಾಗಿದೆ. ಇದು ಕೇವಲ ಪೂಜಾ ಸ್ಥಳವಲ್ಲ, ಆದರೆ ಅಸ್ಸಾಮೀ ಸಾಮರಸ್ಯದ ಜೀವಂತ ಸಂಕೇತವಾಗಿದೆ. ಬಟದ್ರಾವ ಸಾಂಸ್ಕೃತಿಕ ಯೋಜನೆಯು ಆಧ್ಯಾತ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಜೊತೆಗೆ ಶ್ರೀಮಾತಾ ಶಂಕರದೇವರ ಭಕ್ತಿ, ಸಮಾನತೆ ಮತ್ತು ಸಾಮಾಜಿಕ ಸಾಮರಸ್ಯದ ಸಂದೇಶಕ್ಕೆ ಶಾಶ್ವತ ಗೌರವವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

Share This Article
error: Content is protected !!
";