ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆಗಿದ್ದು ಎರಡೇ. “ಜನರ ಆದಾಯದ ಇಳಿಕೆ – ಬೆಲೆ ಏರಿಕೆಯ ಹೇರಿಕೆ” ಎಂದು ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಟೀಕಿಸಿದ್ದಾರೆ.
ಹಾಲಿನಿಂದ – ಆಲ್ಕೋಹಾಲು. ಜನನ ಪ್ರಮಾಣ ಪತ್ರದಿಂದ – ಮರಣಪ್ರಮಾಣ ಪತ್ರ… ಬಿತ್ತನೆ ಬೀಜದಿಂದ – ಆಹಾರ ಪದಾರ್ಥ. ಎಲ್ಲದರ ಬೆಲೆ ಏರಿಸಿ ರಾಜ್ಯದ ಪ್ರಜೆಗಳನ್ನು ಗಲ್ಲಿಗೇರಿಸುತ್ತಿರುವ ಇಂಥಹ ಜನವಿರೋಧಿ ಸರ್ಕಾರ ರಾಜ್ಯದ ಜನತೆಗೆ ಬೇಕೇ ??? ಎಂದು ಅವರು ಪ್ರಶ್ನಿಸಿದ್ದಾರೆ.
“ನಾನು ಕೊಟ್ಟೆ ನಾನು ಕೊಟ್ಟೆ” ಎಂದು ಬೀಗುತ್ತಿರುವ ಸನ್ಮಾನ್ಯ ಮುಖ್ಯಮಂತ್ರಿಗಳೇ ನೀವು ಜನರಿಗೆ ಕೊಟ್ಟಿದ್ದು “ಬೆಲೆ ಏರಿಕೆಯ ಶೂಲ” ಎಂದು ಸಿ.ಟಿ ರವಿ ಅವರು ಹರಿಹಾಯ್ದಿದ್ದಾರೆ.