ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿ ಸಂಸದರು ಹಾಗೂ ಮಾಜಿ ಕೇಂದ್ರ ಸಚಿವರಾದ ಪ್ರತಾಪ್‌ಚಂದ್ರ ಸಾರಂಗಿ ಅವರ ಮೇಲೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಗೂಂಡಾ ಸಂಸ್ಕೃತಿ ತೋರಿದ್ದು ಅವರ ನಡೆ ಖಂಡನೀಯ ಎಂದು ಬಿಜೆಪಿ ಆಕ್ರೋಶ ವ್ಯಕ್ತ ಪಡಿಸಿದೆ.
ಸಂಸತ್ ಆವರಣದಲ್ಲಿ ಬಾಲಕ ಬುದ್ಧಿಯ ರಾಹುಲ್ ಗಾಂಧಿ ಅವರ ತಳ್ಳಾಟದ ಪರಿಣಾಮ ಸಂಸದರಾದ ಪ್ರತಾಪ್‌ಚಂದ್ರ ಸಾರಂಗಿ ಗಾಯಗೊಂಡಿದ್ದಾರೆ. ಕಾಂಗ್ರೆಸ್ ಸಂಸ್ಕೃತಿ ಎಂದರೆ ಗೂಂಡಾ ಸಂಸ್ಕೃತಿ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತಿನಲ್ಲೇ ಸಂಸತ್ತಿನ ಹಿರಿಯ ಸದಸ್ಯರಾಗಿರುವ ಸಾರಂಗಿ ಅವರ ಮೇಲೆ ತಳ್ಳಾಟ ನಡೆಸುವ ಮೂಲಕ ಗೂಂಡಾ ಪ್ರವೃತ್ತಿ ತೋರಿರುವ ರಾಹುಲ್‌ಗಾಂಧಿ ಅವರು ಈ ಕೂಡಲೇ ದೇಶದ ಜನತೆಯ ಬಳಿ ಕ್ಷಮೆ ಯಾಚಿಸಬೇಕು. ಸಂಸತ್ತಿಗೆ ಸವಾಲೆಸೆದಿರುವ ಕಾಂಗ್ರೆಸ್ಸಿಗರ ಮಾನಸಿಕತೆಗೆ ಧಿಕ್ಕಾರ ಎಂದು ಬಿಜೆಪಿ ಕಿಡಿ ಕಾರಿದೆ.