ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಳ್ಳಾರಿ, ರಾಯಚೂರು, ಕಲಬುರಗಿ ಸೇರಿದಂತೆ ಸರ್ಕಾರಿ ಜಿಲ್ಲಾಸ್ಪತ್ರೆಗಳಲ್ಲಿ ಬಾಣಂತಿಯರ ಸರಣಿ ಸಾವುಗಳಾದಾಗ ನಿಮಗೆ ಕಣ್ಣೀರು ಬರಲಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಟೀಕಾಪ್ರಹಾರ ಮಾಡಿದೆ.
ಯಾದಗಿರಿ ಜಿಲ್ಲೆಯಲ್ಲಿ 127 ಕಂದಮ್ಮಗಳು ಕಣ್ಣುಬಿಡುವ ಮೊದಲೇ ಮೃತಪಟ್ಟಾಗ ಕನಿಕರವೂ ಆಗಲಿಲ್ಲ ಕಾಂಗ್ರೆಸ್ ನಾಯಕರಿಗೆ ಎಂದು ಜೆಡಿಎಸ್ ಆರೋಪಿಸಿದೆ.
ಸರ್ಕಾರಿ ಆಸ್ಪತ್ರೆಗಳು ಮೃತ್ಯುಕೂಪಗಳಾಗಿ, ಚಿಕಿತ್ಸೆಗಾಗಿ ಬರುವ ಬಡ ಮಹಿಳೆಯರು, ಮಕ್ಕಳು ಹೆಣಗಳಾಗಿ ಹೋಗುತ್ತಿದ್ದಾರೆ. ಈ ದುರಂತಗಳು ಕಾಂಗ್ರೆಸ್ ಸರಕಾರದಲ್ಲಿ ನಿತ್ಯವೂ ಮರುಕಳಿಸುತ್ತಲೇ ಇವೆ ಎಂದು ಜೆಡಿಎಸ್ ದೂರಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಮೇಡಂನವರೇ ನಿಮಗೆ ಕಿಂಚಿತ್ತಾದರೂ ಕನಿಕರವಿದ್ದಿದ್ದರೆ ಬಾಣಂತಿಯರು, ನವಜಾತ ಶಿಶುಗಳು ಮೃತಪಟ್ಟಾಗ ಬಳ್ಳಾರಿ ಜಿಲ್ಲೆಗೆ ಹೋಗಿ ಕೊನೆಪಕ್ಷ ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಬಹುದಾಗಿತ್ತು. ನೀವು ಹೇಳಲಿಲ್ಲ, ಬಳ್ಳಾರಿಗೆ ಹೋಗಲೇ ಇಲ್ಲ.
ಸದಾ ದ್ವೇಷ ರಾಜಕಾರಣ ಮಾಡಲು ಇಡೀ ಸಿದ್ದರಾಮಯ್ಯ ಮಂತ್ರಿ ಮಂಡಲ ಹಾಗೂ ಕಾಂಗ್ರೆಸ್ ಪಕ್ಷ ಮತ್ತು ನಾಯಕರು ಲಜ್ಜೆಗೆಟ್ಟು ಕ್ಯೂ ನಿಂತಿರುತ್ತಾರೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಕಾಂಗ್ರೆಸ್ ಪ್ರೇರಿತ , ಕೊತ್ವಾಲ್ ಶಿಷ್ಯ ಡಿ.ಕೆ ಶಿವಕುಮಾರ್ ಗೂಂಡಾಗಿರಿ ರಾಜ್ಯದಲ್ಲಿ ಹಿಟ್ಲರ್ ಆಡಳಿತವನ್ನು ನೆನಪಿಸುತ್ತಿದೆ. ಹಿಟ್ಲರ್ ಸಂತತಿ ಕೈಯ್ಯಲ್ಲಿ ಆಡಳಿತವಿದೆ! ಎಂದು ಜೆಡಿಎಸ್ ಆರೋಪಿಸಿದೆ.