ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಮಿಳುನಾಡಿಗೆ ಕದ್ದುಮುಚ್ಚಿ ಕಾವೇರಿ ನೀರು ಹರಿಸಿದ್ದಾಯ್ತು, ಮೇಕೆದಾಟು ವಿಚಾರದಲ್ಲಿ ಕರ್ನಾಟಕಕ್ಕೆ ಪದೇ ಪದೇ ಅಡ್ಡಗಾಲಾಗುತ್ತಿದ್ದರೂ ಹಲ್ಲು ಕಿರಿದುಕೊಂಡು ಚೆನ್ನೈಗೆ ಹೋಗಿ ಡಿಎಂಕೆ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿದಿದ್ದಾಯ್ತು, ಈಗ ರಾಗಿ ಖರೀದಿ ಹೆಸರಿನಲ್ಲಿ ಕನ್ನಡಿಗರ ತೆರಿಗೆ ಹಣದಿಂದ ತಮಿಳುನಾಡಿನ ಮಧ್ಯವರ್ತಿಗಳ ಜೇಬು ತುಂಬಿಸುತ್ತಿದೆ ಈ ನಾಡದ್ರೋಹಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸ್ವಾಮಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ಹಾಗು ಕೃಷಿ ಸಚಿವ ಚಲುವನಾರಾಯಣ ಅವರೇ, ಕನಕಪುರದಲ್ಲಿ ರಾಗಿ ಖರೀದಿ ಕೇಂದ್ರಗಳ ಮುಂದೆ ತಮಿಳುನಾಡಿನ ಲಾರಿಗಳು ನಿಂತಿರುವುದು ತಮಗೆ ಕಾಣುತ್ತಿಲ್ಲವೇ?
ತಮಿಳುನಾಡಿನಲ್ಲಿ ಕಡಿಮೆ ಬೆಲೆಗೆ ರಾಗಿ ಖರೀದಿ ಮಾಡಿ ಕರ್ನಾಟಕದಲ್ಲಿ ಮಾರಾಟ ಮಾಡಲು ಬಂದಿರುವ ಕಳ್ಳ ದಂಧೆ ತಮಗೆ ಕಾಣುತ್ತಿಲ್ಲವೇ? ಅಥವಾ ತಾವೂ ಸಹ ಈ ಕಾಳಸಂತೆ ದಂಧೆಯಲ್ಲಿ ಶಾಮೀಲಾಗಿದ್ದೀರೋ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.