ಬಡವರ ಮನೆಗೆ ಕನ್ನ ಹಾಕಿದ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಬಡವರಿಗೆ ಅನ್ನ ಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಕೇಳಿದರೆ ಬಡವರ ಮನೆಗೆ ಸರ್ಕಾರ ಕನ್ನ ಹಾಕಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಹೌಸಿಂಗ್ ಬೋರ್ಡ್
, ಕಲೆಕ್ಷನ್ ಬೋರ್ಡ್ ಆಗಿದೆ. ದುಡ್ಡು ಕೊಟ್ರೆ ಮನೆ ಎಂಬ ಹೊಸ ಸ್ಲೋಗನ್ ಬಿಟ್ಟಿದ್ದಾರೆ. ಕರ್ನಾಟಕ ಸರ್ಕಾರ ಟಿಪ್ಪು ಸರ್ಕಾರ ಆಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಅಲ್ಪಸಂಖಾತರಿಗೆ ವಸತಿ ಯೋಜನೆಯಲ್ಲಿ 15% ಮೀಸಲಾತಿ. ಹಿಂದೂಗಳ ಬಳಿ 60ರಷ್ಟು ಕಮಿಷನ್. ವಸತಿ ಇಲಾಖೆಯಲ್ಲಿ ರಕ್ತ ಹೀರುವ ಜಿಗಣೆಗಳು ಸೇರಿಕೊಂಡಿವೆ. ಬಡವರಿಗೆ ಮನೆ ನೀಡುವ ಬದಲು ಸೇಲ್ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕರು ಆರೋಪಿಸಿದರು.

- Advertisement - 

 ಬಳ್ಳಾರಿಯಲ್ಲಿ ಎರಡು ವರ್ಷದ ಸಂಕಲ್ಪ ಸಮಾವೇಶ ಮಾಡಿದ್ದರು. ಬಡವರನ್ನು ನಾಶ ಮಾಡುವ ಸಂಕಲ್ಪ ಮಾಡಿದ್ದಾರೆ. ಬಡವರಿಗೆ ಮನೆ ನೀಡಲು ಅರ್ಜಿ ಬೇಡ ಮುಖ್ಯಮಂತ್ರಿ ಮರ್ಜಿ ಇದ್ರೆ ಸಾಕು” ಎಂದು ಕಿಡಿಕಾರಿದರು.”ಒಂದಾದ ಮೇಲೆ ಒಂದು ಇಲಾಖೆ ಕಮಿಷನ್ ದಂಧೆಗೆ ನಿಂತಿದೆ. ಮನೆಗಾಗಿ ಕಾಸು ಈಗ ಬಹಳ ಚರ್ಚೆಯಲ್ಲಿದೆ. ನಾವು ಮಾಡುವ ಆಪಾದನೆ ಮಾಧ್ಯಮದವರು ಕೇಳಿದ್ರೆ ನೀನು ಬಿಜೆಪಿಯವರ ಎಂದು ಸಿಎಂ ಕೇಳ್ತಾರೆ. ಈಗ ನಾನು ಹೇಳಿಲ್ಲ, ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲರೇ ಆಪಾದನೆ ಮಾಡಿದ್ದಾರೆ. ಬೋಗಸ್ ಎಂದು ಹೇಳಲು ರೆಡಿಯಾಗಿದ್ರು, ಅವರು ಧ್ವನಿ ನನ್ನದೆ ಎಂದ ಮೇಲೆ ಸುಮ್ಮನಾಗಿದ್ದಾರೆ” ಎಂದರು.

ಬಿ.ಆರ್ ಪಾಟೀಲ್​ ಹಿರಿಯ ಶಾಸಕರು, ಗೌರವಾನ್ವಿತರು. ರಾಜ್ಯದ ನೀತಿ ಆಯೋಗದ ಉಪಾಧ್ಯಕ್ಷರಾಗಿದ್ದಾರೆ. ಮುಖ್ಯಮಂತ್ರಿಗಳೇ ಅವರನ್ನ ನೇಮಕ ಮಾಡಿದ್ದಾರೆ. ಸಿಎಂ ನೇಮಿಸಿದವರೇ ಸರ್ಕಾರದ ಮೇಲೆ ಆಪಾದನೆ ಮಾಡ್ತಿದ್ದಾರೆ. ಸಿದ್ದರಾಮಯ್ಯ ಒಂದೇ ಒಂದು ಮಾತಾಡ್ತಿಲ್ಲ ಮೂಕ ರಾಮಯ್ಯ ಆಗಿದ್ದಾರೆ. ನಾನು ಬಾಯ್ಬಿಟ್ರೆ ಸರ್ಕಾರ ಮೂರು ದಿನ ಉಳಿಯಲ್ಲ ಎಂದು ಬಿ.ಆರ್. ಪಾಟೀಲ್ ಹೇಳಿದ್ದಾರೆ. ಇನ್ನೇನು ಮರ್ಯಾದೆ ಇದೆ ಈ ಸರ್ಕಾರಕ್ಕೆ?. ಸರ್ಕಾರ ನಡೆಸಲು ನೈತಿಕತೆ ಇದೆಯಾ?. ಸರ್ಕಾರದ ಭ್ರಷ್ಟಾಚಾರದಲ್ಲಿ ಮುಳುಗಿದೆ ಎನ್ನುವುದಕ್ಕೆ ಬಿ.ಆರ್. ಪಾಟೀಲರ ಮಾತೇ ಸಾಕ್ಷಿ ಎಂದು ಹೇಳಿದರು.

- Advertisement - 

ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಈ ಹಿಂದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ಸಿಎಂ ಸಲಹೆಗಾರರಿಂದಲೇ ಈ ಆಪಾದನೆ ಕೇಳಿ ಬರ್ತಿರೋದು‌. ನಮ್ಮ ಮೇಲೆ 40% ಆರೋಪ ಮಾಡಿದ್ದ ಗುತ್ತಿಗೆದಾರರು ಈಗ 60% ಕಮಿಷನ್ ಆರೋಪ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಒಂದೇ ಒಂದು ಅಭಿವೃದ್ಧಿ ಮಾಡಲಾಗಲಿಲ್ಲ ಎಂದಿದ್ರು ಬಿ.ಆರ್. ಪಾಟೀಲ್. ಬಿಹಾರದ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ‌ ಎಂದು ಅಶೋಕ್ ಆರೋಪಿಸಿದರು.

ಮನೆ ಪಡೆದವರು ಅರ್ಹರಾ ಅನರ್ಹರಾ?. ಇಲ್ಲಿಯವರೆಗೆ ಎಷ್ಟು ಮನೆ ನೀಡಿದ್ದೀರಾ?, ಮನೆ ಪಡೆದವರ ಪಟ್ಟಿ ಬಿಡುಗಡೆ ಮಾಡಿ. ಬಜೆಟ್ ಮಂಡನೆ ವೇಳೆ 12 ಲಕ್ಷ ಮನೆ ಕಟ್ಟುವುದಾಗಿ ಹೇಳಿದ್ರಿ. ಅವರ ಮಾತಿನ ಪ್ರಕಾರ ಇಷ್ಟೋತ್ತಿಗೆ 6 ಲಕ್ಷ ಮನೆ ನಿರ್ಮಾಣ ಆಗಬೇಕಿತ್ತು. ಇಲ್ಲಿಯವರೆಗೆ 2.75 ಲಕ್ಷ ಮನೆ ಮಾತ್ರ ಕಟ್ಟಲಾಗಿದೆ‌. 50% ಗುರಿಯನ್ನು ಕಾಂಗ್ರೆಸ್ ಸರ್ಕಾರ ತಲುಪಲು ಆಗಿಲ್ಲ. ಗ್ಯಾರಂಟಿಗೆ ಹಣ ಗ್ಯಾರಂಟಿ ಇಲ್ಲದಂತಾಗಿದೆ. ಎಲೆಕ್ಷನ್ ಬಂದಾಗ ಮಾತ್ರ ಗ್ಯಾರಂಟಿ ಹಣ ಬಿಡುಗಡೆಯಾಗುತ್ತದೆ. ಈ ಸರ್ಕಾರ ತೊಲಗದಿದ್ರೆ ಲೂಟಿಕೋರರು ಹೆಚ್ಚಾಗುತ್ತಾರೆ ಎಂದು ವಿಪಕ್ಷ ನಾಯಕರು ಕಿಡಿಕಾರಿದರು.

 

Share This Article
error: Content is protected !!
";