ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಂಗೈನಲ್ಲಿ ಆಕಾಶ ತೋರಿಸಿ, ರಾಜ್ಯದ ಜನತೆಗೆ ಯಾಮಾರಿಸಿ ಅಧಿಕಾರ ಹಿಡಿದಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಎರಡೇ ವರ್ಷಕ್ಕೆ ʼಗೃಹಲಕ್ಷ್ಮಿʼ ಯೋಜನೆಗೆ ಎಳ್ಳುನೀರು ಬಿಟ್ಟಿದೆ! ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ.
ನುಡಿದಂತೆ ನಡೆಯಲಾಗದ ಸಿದ್ದರಾಮಯ್ಯನವರು ಕಳೆದ ಮೂರು ತಿಂಗಳಿಂದ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ನೀಡಿಲ್ಲ. ಇದರಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಾಂಗ್ರೆಸ್‌ನ ಮೋಸದ ಜಾಲಕ್ಕೆ ಸಿಲುಕಿ ಆಕ್ರೋಶಗೊಂಡ ಮಹಿಳೆಯರು ಹಣ ಬಿಡುಗಡೆಗೆ ಒತ್ತಾಯಿಸುತ್ತಿದ್ದರೂ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಅವರು ಕಾಣದಂತೆ ಮಾಯವಾಗಿದ್ದಾರೆ ಎಂದು ವಿಜಯೇಂದ್ರ ದೂರಿದರು.
ಸಿದ್ದರಾಮಯ್ಯನವರೇ, ಗೃಹಲಕ್ಷ್ಮಿ ಹಣ ನೀಡುತ್ತೀರಾ? ಅಥವಾ ಆರ್ಥಿಕ ದಿವಾಳಿಯಿಂದಾಗಿ ಯೋಜನೆ ಸ್ಥಗಿತಗೊಳಿಸಿದ್ದೀರಾ? ಕೂಡಲೇ ಸ್ಪಷ್ಟಡಿಸಿ ಎಂದು ವಿಜಯೇಂದ್ರ ತಾಕೀತು ಮಾಡಿದ್ದಾರೆ.

