ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಧಿಕಾರಕ್ಕೆ ಬಂದ ದಿನದಿಂದ ಕಲೆಕ್ಷನ್, ಕಮಿಷನ್ ಎನ್ನುತ್ತಾ ಕರ್ನಾಟಕ ಕಾಂಗ್ರೆಸ್ ಲೂಟಿಗಿಳಿದ ಪರಿಣಾಮ ಇಂದು ಗುತ್ತಿಗೆದಾರರರು ಬೀದಿಗಿಳಿಯುವ ಪರಿಸ್ಥಿತಿ ಬಂದಿದೆ. ಕಾಮಗಾರಿ ಪೂರ್ಣವಾಗಿ 2 ವರ್ಷ ಕಳೆದರೂ ಗುತ್ತಿಗೆದಾರರ ಬಾಕಿ ಬಿಲ್ ಹಣ ಪಾವತಿಯಾಗಿಲ್ಲ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಬಿಲ್ ಪಾವತಿಸದ ಕಾರಣ ಜೀವನ ನಡೆಸಲು ಸಾಧ್ಯವಾಗದೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು, ದಯಾಮರಣಕ್ಕೆ ಅರ್ಜಿ ಸಲ್ಲಿಸುವ ಸನ್ನಿವೇಶಗಳನ್ನು ಸಿದ್ದರಾಮಯ್ಯ ಸರ್ಕಾರವು ಸೃಷ್ಟಿಸಿದೆ.
ಲಂಚಬಾಕ ಸರ್ಕಾರದಿಂದಾಗಿ ಗುತ್ತಿಗೆದಾರರು, ಪೊಲೀಸ್ ಅಧಿಕಾರಿಗಳು, ಸರ್ಕಾರಿ ನೌಕರರು ಜೀವ ಕಳೆದುಕೊಳ್ಳುತ್ತಿದ್ದಾರೆ. 40 % ಕಮಿಷನ್ ಸುಳ್ಳು ನರೇಟಿವ್ ಮೂಲಕ ಅಧಿಕಾರಕ್ಕೆ ಹಿಡಿದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕಮಿಷನ್ ಹಾಗೂ ಕಲೆಕ್ಷನ್ ಇಲ್ಲದೆ ಯಾವುದೇ ಅನುದಾನ, ಬಾಕಿ ಬಿಲ್ ಬಿಡುಗಡೆಯಾಗುತ್ತಿಲ್ಲ ಎಂದು ಬಿಜೆಪಿ ದೂರಿದೆ.
ಡಿ.ಕೆ ಶಿವಕುಮಾರ ಅವರೇ, ನಿಮ್ಮ ಇಲಾಖೆಯಲ್ಲಿ ಬಾಕಿ ಬಿಲ್ ನೀಡದೆ ಗುತ್ತಿಗೆದಾರರ ಬಳಿ ಡೀಲ್ ಕುದುರಿಸಲು ಕಾಯುತ್ತಿದ್ದೀರಾ ? ಎಂದು ಬಿಜೆಪಿ ತೀಕ್ಷ್ಣವಾಗಿ ಪ್ರಶ್ನಿಸಿದೆ.