ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಸ್ವಾವಲಂಬಿ ಗ್ರಾಮ” ಯೋಜನೆಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಳ್ಳುನೀರು! ಬಿಟ್ಟಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಗ್ಯಾರಂಟಿ ಯೋಜನೆಗಳು ರಾಜ್ಯದ ಅಭಿವೃದ್ಧಿಗೆ ಅಡ್ಟಗಾಲು ಹಾಕಿದೆ. ಆರ್ಥಿಕವಾಗಿ ಬೊಕ್ಕಸಕ್ಕೆ ಹೊರೆ ಹಾಗೂ ಅನುಷ್ಠಾನ ವೆಚ್ಚವೂ ಅಧಿಕ ಎಂಬ ಕಾರಣ ನೀಡಿ ʼಸ್ವಾವಲಂಬಿ ಗ್ರಾಮ‘ ಯೋಜನೆಯನ್ನು ಕರ್ನಾಟಕ ಸರ್ಕಾರ ಕೈಬಿಟ್ಟಿದೆ ಎಂದು ಜೆಡಿಎಸ್ ದೂರಿದೆ.
ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಗ್ರಾಮಗಳನ್ನು ಸ್ವಾವಲಂಬಿಯಾಗಿ ರೂಪಿಸುವ ಮಹತ್ವಾಕಾಂಕ್ಷೆಯ ಪ್ರಯತ್ನದಿಂದ ಹಿಂದೆ ಸರಿದಿರುವುದು ಸರ್ಕಾರದ ಖಜಾನೆ ಖಾಲಿಯಾಗಿರುವುದಕ್ಕೆ ಉದಾಹರಣೆ.
ರಾಜ್ಯದ ಅಭಿವೃದ್ಧಿಯನ್ನು ಮರೆತಿರುವ ಕಾಂಗ್ರೆಸ್ ಸರ್ಕಾರ, ಬರೀ ಸುಳ್ಳು ಭಾಷಣ ಮತ್ತು ಜಾಹೀರಾತುಗಳಲ್ಲಿ ಜನರಿಗೆ ಆಕಾಶ ತೋರಿಸುತ್ತಿದೆ. ಸಿದ್ದರಾಮಯ್ಯ ಸರ್ಕಾರಕ್ಕೆ ಅವೈಜ್ಞಾನಿಕ ಗ್ಯಾರಂಟಿಗಳೇ ಆರ್ಥಿಕ ಹೊರೆಯಾಗಿ ಬೆಂಬಿಡದ ಭೂತವಾಗಿ ಪರಿಣಮಿಸಿರುವುದು ಸತ್ಯ ಎಂದು ಜೆಡಿಎಸ್ ಹೇಳಿದೆ.