ಗುತ್ತಿಗೆದಾರರುಗಳಿಂದ ಕಮಿಷನ್ ವಸೂಲಿಗೆ ಇಳಿದ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ‘Pay CM’ ಹೆಸರಿನಲ್ಲಿ ಅಪಪ್ರಚಾರದ ಮುಂಚೂಣಿಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕಾಂಗ್ರೆಸ್ಸಿಗರು ಸರ್ಕಾರದ ಖಜಾನೆಯನ್ನು ಬರಿದುಮಾಡಿ ಕುಳಿತಿದ್ದಾರೆ.

ಗುತ್ತಿಗೆದಾರರುಗಳಿಂದ ಕಮಿಷನ್ ವಸೂಲಿ ಮಾಡುವುದರಲ್ಲಿಯೂ ಮುಂಚೂಣಿಯಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.

- Advertisement - 

ಈ ಹಿಂದೆ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದ ದಿವಂಗತ ಡಿ.ಕೆಂಪಣ್ಣನವರು ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಹೊರಿಸಿದ್ದರು‌, ಸದ್ಯ ಈಗಿನ ಅಧ್ಯಕ್ಷರೂ ಸಹ ಅದೇ ಆರೋಪವನ್ನು ಮಾಡುತ್ತಿದ್ದಾರೆ. ಕಮಿಷನ್ ದಂಧೆ ಮಿತಿಮೀರಿ ಹೋಗಿದೆ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ.

ಇತ್ತ ಗುತ್ತಿಗೆದಾರರ ಸಂಕಷ್ಟ ಕೇಳುವವರಿಲ್ಲದಂತಾಗಿದ್ದರೆ, ಅತ್ತ ಅಭಿವೃದ್ಧಿ ಕಾರ್ಯಗಳು ನಿಂತ ನೀರಾಗಿದೆ, ಗುತ್ತಿಗೆದಾರರು ಆರೋಪಿಸುತ್ತಿರುವಂತೆ ಕಮಿಷನ್ ದಂಧೆಯ ಕುರಿತು ಲೋಕಾಯುಕ್ತ ಸ್ವಯಂ ದೂರು ದಾಖಲಿಸಿಕೊಂಡು ಈ ಕೂಡಲೇ ತನಿಖೆ ನಡೆಸಬೇಕೆಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

- Advertisement - 

 

 

 

 

Share This Article
error: Content is protected !!
";