ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್‌ಕೋಟ್ಯಂತರ ರೂ. ಕಮಿಷನ್‌ದಂಧೆ ನಡೆಸಿರುವುದು ದಿನ ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಜಗಜ್ಜಾಹೀರಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.
ತಳಮಟ್ಟದ ಸಣ್ಣ ಸಮುದಾಯಗಳ ಸಬಲೀಕರಣ ಮಾಡುವುದನ್ನು ಬಿಟ್ಟು, ಲಂಚಕ್ಕಾಗಿ ಫಲಾನುಭವಿಗಳ ರಕ್ತ ಹೀರುತ್ತಿರುವ ಧನದಾಹಿ ಅಧ್ಯಕ್ಷ ಇನ್ನೂ ಅಧಿಕಾರದಲ್ಲಿ ಮುಂದುವರಿದಿರುವುದು ದುರದೃಷ್ಟಕರ.
ಭ್ರಷ್ಟ ರವಿಕುಮಾರ್, ಭೂ ಒಡೆತನ ಯೋಜನೆಯಡಿ ಭೂಮಿ ಮಂಜೂರಾದವರಿಗೆ 25 ಲಕ್ಷ ಸಹಾಯಧನ ಬಿಡುಗಡೆ ಮಾಡಲು 5 ಲಕ್ಷದಂತೆ ಕಮಿಷನ್ ಪಡೆದಿದ್ದಾನೆ.
ರಾಜೀನಾಮೆ ಪಡೆಯಲು ಕೈಲಾಗದ ಸಿಎಂ ಸಿದ್ದರಾಮಯ್ಯ, ದುರ್ಬಲ ಡಿಸಿಎಂ ಡಿಕೆ ಶಿವಕುಮಾರ್ ಇನ್ನೂ ಮಿನಾಮೇಷ ಎಣಿಸುತ್ತಿದ್ದಾರೆ ಎಂದು ಜೆಡಿಎಸ್ ದೂರಿದೆ.
ವಿಧಾನಸಭೆಯಲ್ಲೇ ಮುಖ್ಯಮಂತ್ರಿಗಳು ವಾಲ್ಮೀಕಿ ನಿಗಮದ ಭ್ರಷ್ಟಾಚಾರ, SCSP/ TSP ನಿಧಿಯ ಸಾವಿರಾರು ಕೋಟಿ ರೂ. ದುರುಪಯೋಗವನ್ನು ಒಪ್ಪಿಕೊಂಡಿದ್ದಾರೆ.
ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರ, ಹಗರಣಗಳಲ್ಲೇ ಮುಳುಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಭ್ರಷ್ಟರ ರಕ್ಷಣೆಗೆ ನಿಂತಿರುವುದು ನಾಚಿಕೆಗೇಡು ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.

