ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೆಮ್ಮದಿಯಾಗಿ ಬಸ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಜನರು ಬೆಲೆ ಏರಿಕೆಯಿಂದ ಬೇಸತ್ತು ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಛೀ ಥೂ ಎಂದು ಕ್ಯಾಕರಿಸಿ ಉಗಿಯುತ್ತಿದ್ದರೂ, ಲಜ್ಜೆಬಿಟ್ಟು ನಿಂತಿರುವ ಸರ್ಕಾರ ಸಮಯ ಉಳಿತಾಯಕ್ಕಾಗಿ ಜನಸಾಮಾನ್ಯರು ಬಳಕೆ ಮಾಡುತ್ತಿದ್ದ ಮೆಟ್ರೋ ಪ್ರಯಾಣ ದರವನ್ನು ಓಲಾ, ಉಬರ್, ರಾಪಿಡೊಗೆ ಪೈಫೋಟಿ ನೀಡುವ ನಿಟ್ಟಿನಲ್ಲಿ ಏರಿಕೆ ಮಾಡಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಜನರು ಏನೇ ಮಾಡಿದರೂ ಸಹಿಸಿಕೊಂಡು ಸುಮ್ಮನೆ ಇರುತ್ತಾರೆ ಎಂದುಕೊಂಡ ಭ್ರಷ್ಟ ಸಿದ್ದರಾಮಯ್ಯ ಸರ್ಕಾರಕ್ಕೆ ಜನಸಾಮಾನ್ಯರು ಮೈ ಚಳಿ ಬಿಡಿಸಿದ್ದಾರೆ. ದರ ಏರಿಕೆ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿ ಎಚ್ಚರಿಕೆ ನೀಡಿದ್ದಾರೆ.
ಜನರು ಇನ್ಮುಂದೆ ಮೆಟ್ರೋ ಪ್ರಯಾಣವನ್ನು ಬಾಯ್ಕಟ್‌ಮಾಡಲು ನಿರ್ಧರಿಸುವುದು, ಸಾರಿಗೆ ನಿಗಮಗಳಂತೆ ಬಿಎಂಆರ್‌ಸಿಎಲ್‌ಸಂಸ್ಥೆಯೂ ದಿವಾಳಿ ಆಗಲಿರುವುದು ಕಾಂಗ್ರೆಸ್ಸಿನ ಉಚಿತ, ಖಚಿತ, ನಿಶ್ಚಿತ ಗ್ಯಾರಂಟಿ ಎಂದು ಬಿಜೆಪಿ ಭವಿಷ್ಯ ನುಡಿದಿದೆ.