ನಿತ್ಯ ದರ ಏರಿಕೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸುಳ್ಳು ಭರವಸೆಗಳು, ಆಮಿಷಗಳನ್ನೊಡ್ಡಿ ಅಧಿಕಾರಕ್ಕೆ ಬಂದ ಕರ್ನಾಟಕ ಕಾಂಗ್ರೆಸ್ ಸರ್ಕಾರ ನಾಡಿನ ಜನರಿಗೆ ದರ ಏರಿಕೆಯ ಕುಣಿಕೆಯ ಮೂಲಕ ವಸೂಲಿಗೆ ಇಳಿದಿರುವುದು ದುರಂತವೇ ಸರಿ. ಅಧಿಕಾರಕ್ಕೆ ಬಂದ ದಿನದಿಂದಲೂ ಒಂದಿಲ್ಲೊಂದು ದರ ಏರಿಕೆಯ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಪ್ರಯೋಗ ಮಾಡುತ್ತಲೇ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹರಿಹಾಯ್ದಿದ್ದಾರೆ.

ಇತ್ತೀಚೆಗಷ್ಟೇ ಸಾರಿಗೆ ಬಸ್ ದರ, ನೀರಿನ ದರ, ಮೆಟ್ರೋ ದರ ಏರಿಸುವ ಮೂಲಕ ಜನಸಾಮಾನ್ಯರ ಆಕ್ರೋಶಕ್ಕೆ ಗುರಿಯಾಗಿರುವಾಗಲೇ ವಿದ್ಯುತ್ ದರ ಹೆಚ್ಚಳದ ಮೂಲಕ ಜನರಿಗೆ ಗಾಯದ ಮೇಲೆ ಬರೆ ಎಳೆಯಲು ಹೊರಟಿರುವುದನ್ನು ನೋಡಿದರೆ ಈ ಸರ್ಕಾರ ಬೆಲೆ ಏರಿಕೆಯ ಭಾಗ್ಯವೆಂಬಮತ್ತೊಂದು ಗ್ಯಾರಂಟಿಯನ್ನು ನಿತ್ಯವೂ ಜಾರಿಯಲ್ಲಿಡಲು ಹೊರಟಂತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಂತೂ ನಿಂತು ಹೋಗಿವೆ, ಹೊಸ ಕಾಮಗಾರಿಗಳ ಶಂಕುಸ್ಥಾಪನೆಯಂತೂ ಕನಸಿನ ಮಾತು, ಒಂದೇ ಒಂದು ಹೊಸ ಯೋಜನೆ ಜಾರಿಗೆ ತರಲಿಲ್ಲ, ಭ್ರಷ್ಟಾಚಾರ ಹಾಗೂ ಅಕ್ರಮಗಳು ನಿಲ್ಲುತ್ತಿಲ್ಲ. ಇದೀಗ ವಿದ್ಯುತ್ ದರ ಏರಿಸಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರ ತನ್ನ ಜನವಿರೋಧಿ ನಿಲುವು ಬದಲಿಸದಿದ್ದರೆ ರಾಜ್ಯಾದ್ಯಂತ ಹೋರಾಟದ ಬಿಸಿ ಎದುರಿಸಬೇಕಾದೀತು ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.

 

 

Share This Article
error: Content is protected !!
";