ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ನಿಮ್ಮತ್ರ ಬಜೆಟ್ ಎಷ್ಟಿದೆ ಅದಕ್ಕೆ ತಕ್ಕಂತೆ ಗ್ಯಾರಂಟಿಗಳನ್ನು ಕೊಡಿ” ರಾಜ್ಯದಲ್ಲಿ ಅವಾಸ್ತವಿಕ ಯೋಜನೆ ಜಾರಿಗೆ ತಂದು ಖಜಾನೆ ಬರಿದು ಮಾಡಿ, ಸಮಯಕ್ಕೆ ಸರಿಯಾಗಿ ಕಪ್ಪ ಸಲ್ಲಿಸದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಖರ್ಗೆ ಹೇಳಿದ ಕಿವಿ ಮಾತಿದು ಎಂದು ಬಿಜೆಪಿ ತಿರುಗೇಟು ನೀಡಿದೆ.
ಅವಾಸ್ತವಿಕ ಆಮಿಷ ಒಡ್ಡುವ ಯೋಜನೆಗಳ ಜಾರಿ ಪರಿಣಾಮ ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ದಿನಕ್ಕೊಬ್ಬ ಶಾಸಕರು ಸಿಎಂ ಸಿದ್ದರಾಮಯ್ಯ ಅವರ ನಾಯಕತ್ವ ವೈಫಲ್ಯ ಪ್ರಶ್ನಿಸುತ್ತಿದ್ದಾರು, ಇದೀಗ ಹೈಕಮಾಂಡ್ ಖರ್ಗೆ ಅವರೇ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಅಂಕುಶ ಹಾಕುತ್ತಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಎಟಿಎಂ ಸರ್ಕಾರವಾಗಿದ್ದ ಕರ್ನಾಟಕ ಈಗ ದಿವಾಳಿ ಅಂಚಿಗೆ ತಲುಪಿದ್ದು, ಮಹಾರಾಷ್ಟ್ರ ಚುನಾವಣೆಗೆ ಹೈಕಮಾಂಡ್‌ಗೆ ಸರಿಯಾಗಿ “ಕಪ್ಪ” ತಲುಪಿಸದ ಕಾರಣ ರಾಜ್ಯ ನಾಯಕರನ್ನು ಖರ್ಗೆ ಪ್ರಶ್ನಿಸಿದ್ದು, ಇನ್ನಷ್ಟು ಕಪ್ಪ ಸಂಗ್ರಹಕ್ಕಾಗಿ ಗ್ಯಾರಂಟಿಗೆ ಕಡಿವಾಣ ಹಾಕಲು ಪರೋಕ್ಷವಾಗಿ ಸೂಚಿಸಿದ್ದಾರೆ.
ಗ್ಯಾರಂಟಿ ಎಂಬ ಸೋಗಿನಲ್ಲಿ ಅಧಿಕಾರಕ್ಕೆ ಏರಿದ್ದ ಸಿದ್ದರಾಮಯ್ಯನವರ ಸರ್ಕಾರ, ಈಗ ಜನರ ಕೈಗೆ ಚಿಪ್ಪು ನೀಡಲು ಮುಂದಾಗಿದೆ ಎಂದು ಬಿಜೆಪಿ ಭವಿಷ್ಯ ನುಡಿದಿದೆ.