ಜನೌಷಧಿ ಕೇಂದ್ರಗಳನ್ನು ಮುಚ್ಚಿದ ಕಾಂಗ್ರೆಸ್ ಸರ್ಕಾರ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಡವರ ಏಳಿಗೆ ಹಾಗೂ ಬಡವರಿಗಾಗುವ ಉಪಯೋಗಗಳನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಒಂದು ವೇಳೆ ಬಡವರು ಆರ್ಥಿಕವಾಗಿ ಸಬಲರಾದರೆ ತನ್ನ “ಗರೀಬಿ ಹಠಾವೋ” ಮತ್ತಷ್ಟು ಸವಕಲು ಹಿಡಿಯಲಿದೆ ಎಂಬುದು ಕಾಂಗ್ರೆಸ್ಸಿಗರ ಅಂತರಾಳದಲ್ಲಿರುವ ಆತಂಕ!!
ಪ್ರತಿ ತಿಂಗಳು ಔಷಧಿ ಖರ್ಚಿಗಾಗಿ ಭಾರತೀಯರು ಸಾವಿರಾರು ರೂಪಾಯಿಗಳನ್ನು ವ್ಯಯಿಸುವುದನ್ನು ಮನಗಂಡು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅತ್ಯಂತ ಕಡಿಮೆ ಬೆಲೆಗೆ ಔಷಧಿಗಳು ಸಿಗುವಂತಾಗಲಿ ಎಂದು ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿದರು.
ಉಳಿದೆಲ್ಲಾ ಔಷಧಾಲಯಗಳಿಗೆ ಹೋಲಿಸಿದರೆ ಜನೌಷಧಿ ಕೇಂದ್ರದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಅಂದರೆ, ಬೇರೆ ಕಡೆ ₹100 ಗೆ ಸಿಗುವ ಔಷಧ, ಜನೌಷಧ ಕೇಂದ್ರದಲ್ಲಿ ₹30 ಕ್ಕೆ ದೊರೆಯುತ್ತಿತ್ತು.
ಹೀಗಾಗಿ ಜನೌಷಧಿ ಕೇಂದ್ರದಲ್ಲಿ ಔಷಧಗಳನ್ನು ಖರೀದಿಸಲು ಜನ ಮುಗಿ ಬೀಳುತ್ತಿದ್ದರು. ಜನಸಾಮಾನ್ಯನೊಬ್ಬನ ಪ್ರತಿ ತಿಂಗಳ ಔಷಧದ ಬಜೆಟ್ ನಲ್ಲಿ ಶೇ.70 ರಷ್ಟು ದುಡ್ಡು ಉಳಿತಾಯವಾಗುತ್ತಿತ್ತು.
ಆದರೆ ಇದರಿಂದ ನಷ್ಟ ಅನುಭವಿಸಿದ ಮೆಡಿಸಿನ್ ಮಾಫಿಯಾದ ಲಾಭಿಗೆ ಮಣಿದಿರುವ ಭ್ರಷ್ಟ ಹಾಗೂ ಭಂಡ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಕರ್ನಾಟಕದಲ್ಲಿ ಜನೌಷಧಿ ಕೇಂದ್ರಗಳನ್ನು ಮುಚ್ಚಲು ಮುಂದಾಗಿದೆ.ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳನ್ನು ಉಚಿತವಾಗಿ ವಿತರಿಸುತ್ತಿದ್ದೇವೆ ಹಾಗಾಗಿ ಜನೌಷಧಿ ಕೇಂದ್ರಗಳನ್ನು ಮುಚ್ಚುತ್ತೇವೆ ಎಂದು ಮೊಂಡುವಾದ ಮಾಡುತ್ತಿದೆ ಕಾಂಗ್ರೆಸ್!!
ಸದ್ಯ ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರೇ ಇಲ್ಲ, ಅಂತಹುದರಲ್ಲಿ ಜನರಿಗೆ ಅಗತ್ಯವಿರುವ ಔಷಧಗಳು ಲಭಿಸುತ್ತವೆ ಅನ್ನುವುದಕ್ಕೆ ಏನು ಗ್ಯಾರಂಟಿ..??
ಸರ್ಕಾರಿ ಆಸ್ಪತ್ರೆಗಳಲ್ಲಿ ಬರುವ ಸಾರ್ವಜನಿಕರಿಗೆ ನೀಡುವ ಚೀಟಿಯ ದರವನ್ನೇ ಏರಿಸಿರುವ ದಿವಾಳಿ ಕಾಂಗ್ರೆಸ್ ಸರ್ಕಾರ ಉಚಿತವಾಗಿ ಔಷಧ ವಿತರಿಸುತ್ತದೆ ಎಂಬುದು ಅತ್ಯಂತ ಹಾಸ್ಯಾಸ್ಪದ ಸಂಗತಿ.
ಸಿಎಂ ಸಿದ್ದರಾಮಯ್ಯ ಅವರೆ, ಮೆಡಿಸಿನ್ ಮಾಫಿಯಾಗೆ ಮಣಿದು ಬಡವರ ಪಾಲಿನ ಸಂಜೀವಿನಿಯಾಗಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವ ನಿರ್ಧಾರವನ್ನು ಈ ಕೂಡಲೇ ಹಿಂಪಡೆಯಿರಿ. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ಖಚಿತ ಎಂದು ಬಿಜೆಪಿ ಎಚ್ಚರಿಸಿದೆ.