ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್‌ಸರ್ಕಾರಕ್ಕೆ ಬಹುಮತವಿದ್ದರೂ ಪತನದ ಭಯ ಕಾಡುತ್ತಿದೆ. ಇದಕ್ಕೆ ಕಾರಣ ಸಿಎಂ ಗದ್ದುಗೆಯ ಹೋರಾಟ ಎಂದು ಬಿಜೆಪಿ ಭವಿಷ್ಯ ನುಡಿದಿದೆ.
ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆಪರೇಶನ್‌ಹಸ್ತ ಮೂಲಕ ಅನ್ಯ ಪಕ್ಷಗಳ ಶಾಸಕರನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದರೆ, ಅತ್ತ ತಾನೇನು ಕಮ್ಮಿ ಇಲ್ಲವೆಂಬಂತೆ ಓಲಾಡುತ್ತಿರುವ ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಅವರು ಕೂಡಾ ಆಪರೇಶನ್‌ಹಸ್ತಕ್ಕೆ ಇಳಿದಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ತಮ್ಮವರಿಂದಲೇ ಸರ್ಕಾರವನ್ನು ಉಳಿಸಿಕೊಳ್ಳಲು ಕರ್ನಾಟಕ ಕಾಂಗ್ರೆಸ್ ಪಕ್ಷ ಶೇ.60% ಕಮಿಷನ್‌ಸಂಗ್ರಹಿಸುತ್ತಿದೆ. ಅಕ್ರಮ ಹಣ ಸಂಗ್ರಹಿಸಿ ಅನ್ಯ ಪಕ್ಷಗಳ ಶಾಸಕರಿಗೆ ಕೋಟಿ ಕೋಟಿ ರೂಪಾಯಿ, ಪದನಾಮಗಳ ಆಮಿಷ ಒಡ್ಡುತ್ತಿದೆ. ಆಪರೇಶನ್‌ಹಸ್ತಕ್ಕೆ ಕಾಂಗ್ರೆಸ್‌ಹೈಕಮಾಂಡ್‌ಒಪ್ಪಿಗೆಯಿದೆಯಾ!? ಎಂದು ಬಿಜೆಪಿ ಪ್ರಶ್ನಿಸಿದೆ.