ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿರುವ ವಚನ ಭ್ರಷ್ಟ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಲ್ಲರಿಗೂ
10 ಕೆ.ಜಿ. ಅಕ್ಕಿ ಕೊಡುತ್ತೇನೆ ಎಂದು ಸುಳ್ಳು ಭರವಸೆ ಕೊಟ್ಟು ಅಧಿಕಾರ ಹಿಡಿದ ವಚನ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಈಗ ಬಡವರ ಒಂದು ತುತ್ತಿನ ಅನ್ನಕ್ಕೂ ಕಲ್ಲು ಹಾಕುತ್ತಿದೆ ಎಂದು ಜೆಡಿಎಸ್ ಟ್ವೀಟ್ ವಾಗ್ದಾಳಿ ಮಾಡಿದೆ.

ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಬೊಕ್ಕಸ ಬರಿದು ಮಾಡಿರುವ ಖಾಲಿ ಕೈ ಸರ್ಕಾರ, ಪಡಿತರ ಕೊಡಲು ಕೈಲಾಗದೇ ಇಲ್ಲ ಸಲ್ಲದ ಕುಂಟು ನೆಪಗಳನ್ನು ಹೇಳಿಕೊಂಡು ಲಕ್ಷಾಂತರ ಸಂಖ್ಯೆಯಲ್ಲಿ ರೇಷನ್‌ಕಾರ್ಡ್‌ಗಳನ್ನು ರದ್ದುಮಾಡುತ್ತಿದೆ. ಇದರಿಂದ ಬಡವರು ಆಹಾರ ಇಲಾಖೆ ಕಚೇರಿಗಳಗೆ ಕಾರ್ಡ್‌ಗಳನ್ನು ಹಿಡಿದು ಅಲೆಯುತ್ತಾ ಕಣ್ಣೀರಿಟ್ಟು ಸಿದ್ದರಾಮಯ್ಯ  ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

 ನುಡಿದಂತೆ ನಡೆಯುತ್ತಿದ್ದೇವೆ ಎಂದು ಸುಳ್ಳುಗಳನ್ನು ಹೇಳುತ್ತ ಬಡವರ ಸೌಲಭ್ಯಗಳಿಗೆ ಕತ್ತರಿ ಹಾಕುತ್ತಿರುವ ಈ ಜನವಿರೋಧಿ ಕಾಂಗ್ರೆಸ್‌ಸರ್ಕಾರಕ್ಕೆ ನಾಡಿನ ಜನ ತಕ್ಕ ಪಾಠ ಕಲಿಸುವುದು ಗ್ಯಾರಂಟಿ ಎಂದು ಜೆಡಿಎಸ್ ವಿಶ್ವಾಸ ವ್ಯಕ್ತ ಪಡಿಸಿದೆ.

 

- Advertisement -  - Advertisement -  - Advertisement - 
Share This Article
error: Content is protected !!
";