ಕಾಂಗ್ರೆಸ್ ಸರ್ಕಾರ ಭ್ರಷ್ಟಾತಿ ಭ್ರಷ್ಟ, ಇದರ ಸಿಎಂ ಹಗರಣಗಳ ಡಾನ್- ನವೀನ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಕಾಂಗ್ರೆಸ್ ಸರ್ಕಾರ ಭ್ರಷ್ಟಾತಿ ಭ್ರಷ್ಟ ಪಕ್ಷ. ಈ ಪಕ್ಷದ ನೇತೃತ್ವ ವಹಿಸಿ ಸರ್ಕಾರ ರಚನೆ ಮಾಡಿರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಗರಣಗಳ ಡಾನ್ ಎಂದು ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಗಂಭೀರ ಆರೋಪ ಮಾಡಿದರು.

ಚಿತ್ರದುರ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶೋಷಿತ ಪರಿಶಿಷ್ಟ ಪಂಗಡ ಸಮುದಾಯದ ನಿಗದಲ್ಲಿನ ನೂರಾರು ಕೋಟಿ ರೂ.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ಲೋಕಸಭಾ ಚುನಾವಣೆಗೆ ಖರ್ಚು ಮಾಡಿರುವ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ನಾಗೇಂದ್ರ ಮತ್ತು ಕಾಂಗ್ರೆಸ್ ಪಕ್ಷದ ಶಾಸಕರಿಗೆ ಸಲ್ಲುತ್ತದೆ ಎಂದು ನವೀನ್ ವಾಗ್ದಾಳಿ ಮಾಡಿದರು.

ಮಹರ್ಷಿ ವಾಲ್ಮೀಕಿ ಅವರು ರಚಿಸಿರುವ ರಾಮಾಯಣವು ನಮ್ಮ ದೇಶಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದೆ. ಬಿ.ಎಸ್ ಯಡಿಯೂರಪ್ಪನವರ ಸರ್ಕಾರದಲ್ಲಿ ವಾಲ್ಮೀಕಿ ಜಯಂತಿ ಆಚರಣೆಗೆ ಜಾರಿ ಮಾಡಿತು. ಬಿಜೆಪಿ ಪಕ್ಷದ ಸರ್ಕಾರ ಅವಧಿಯಲ್ಲಿ ಎಸ್‌ಟಿ ವರ್ಗದ ಜನರಿಗೆ ತಮ್ಮದೇ ಕೊಡುಗೆ ನೀಡುತ್ತಾ ಬಂದಿದ್ದಾರೆ.

 ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ೭-೮ ತಿಂಗಳಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂ ಹಗರಣ ಮಾಡಿದ್ದಾರೆ. ವಾಲ್ಮೀಕಿ ಸಮುದಾಯದ ಜನರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಸ್ವಂತ ಬಳಕೆ ಮಾಡುವುದರ ಜೊತೆಗೆ ಲೋಕಸಭಾ ಚುನಾವಣೆ ಹಾಗೂ ತೆಲಂಗಾಣ ಚುನಾವಣೆಗೆ ಬಳಕೆಯಾಗಿರೋದು ಸ್ಪಷ್ಟವಾಗಿ ಗೋಚರವಾಗಿದೆ.

ಯಾರ ಬದುಕಿಗೆ ಬೆಳಕಾಗಬೇಕಾಗಿತ್ತೋ. ಯಾರ ಬದುಕಿಗೆ ಭದ್ರಬೂನಾದಿಯಾಗ ಬೇಕಾಗಿತ್ತೋ ಆ ಹಣವನ್ನು ಕಾಂಗ್ರೆಸ್ ನವರು ತಮ್ಮ ಐಷಾರಾಮಿ ಜೀವನ ನಡೆಸುವುದಕ್ಕೆ ಬಳಸಿಕೊಂಡಿದ್ದಾರೆ ಎಂದು ದೂರಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ವಾಲ್ಮೀಕಿ ಜಯಂತಿ ಮಾಡುವ ನೈತಿಕತೆ ಇಲ್ಲ. ಅವರು ಆ ನೈತಿಕತೆ  ಕಳೆದುಕೊಂಡಿದ್ದಾರೆ. ಎಸ್‌ಟಿ ಸಮುದಾಯದ ವಿದ್ಯಾರ್ಥಿಗಳ ಹಣ ದುರುಪಯೋಗ ಮಾಡಿಕೊಂಡಿರುವ  ಸಿದ್ದರಾಮಯ್ಯ ಹಾಗೂ ಸರ್ಕಾರ ಎಸ್‌ಟಿ ಸಮುದಾಯದ ವಿದ್ಯಾರ್ಥಿಗಳ ಕ್ಷಮೆ ಕೇಳಬೇಕಿತ್ತು. ಸರ್ಕಾರದ ಹಣ ಬಳಸಿಕೊಂಡು ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಸರ್ಕಾರಕ್ಕೆ ಜಾಹೀರಾತು ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದು ವಾಲ್ಮೀಕಿ ಜಯಂತಿಯಂದೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಕಂಡವರ ಮಕ್ಕಳನ್ನ ಬಲಿ ಕೊಡುವುದರಲ್ಲಿ ಸಿದ್ದರಾಮಯ್ಯ ಎತ್ತಿದ ಕೈ. ಸಿನಿಮಾಗಳಲ್ಲಿ ಗುಂಪಿನ ಹಿಂದೆ ಒಬ್ಬ ಸೂತ್ರದಾರ ಇರುವ ಹಾಗೆ ಸಿದ್ದರಾಮಯ್ಯ ಇದ್ದು ಈ ಹಗರಣಗಳಿಗೆ ಯಾರು ಡಾನ್ ಎನ್ನುವ ಮೂಲಕ ಸಿ ಎಂ ಸಿದ್ದರಾಮಯ್ಯ ಅವರನ್ನ ಹಗರಣಗಳ ಡಾನ್ ಎಂದು ಹೇಳಬೇಕಾಗಿದೆ ಎಂದರು.

ವಾಲ್ಮೀಕಿ ಹಗರಣದಲ್ಲಿ ಸಚಿವ ನಾಗೇಂದ್ರರವರ ರಾಜೀನಾಮೆ ಪಡೆಯಲಾಯಿತು. ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರು ನೇರವಾಗಿ ಕಾರಣರಿದ್ದರೂ ಸಹ ಕೇವಲ ಅಧಿಕಾರಿಗಳನ್ನು ಮಾತ್ರ ಅಮಾನತ್ತು ಗೊಳಿಸಲಾಗಿದೆ. ಸಿದ್ದರಾಮಯ್ಯರವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ೧೮೭ ಕೋಟಿ ಅಲ್ಲ ೮೯ ಕೋಟಿ ರೂ ಎಂದು. ಇಷ್ಟೆಲ್ಲಾ ಹಗರಣ ಮಾಡಿರೋ ಸಿದ್ದರಾಮಯ್ಯನವರೇ ಈ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಹೇಗೆ ಭಾಗವಹಿಸುತ್ತೀರಿ.?

ನಗರದಲ್ಲಿ ಮದಕರಿ ನಾಯಕ ಥೀಮ್ ಪಾರ್ಕ್ ನಿರ್ಮಾಣಕ್ಕೆ ೩೦ ಎಕರೆ ಜಮೀನು ಬೇಕಾಗಿದೆ. ಜಿಲ್ಲಾಡಳಿತ 30 ಎಕರೆ ನೀಡಿದರೆ ಅಮಿತ್ ಶಾ ರವರು ನೀಡಿದ ಭರವಸೆ ಈಡೇರಿಸಲಿದ್ದೇವೆ. ಪ್ರವಾಸೋದ್ಯಮ ಇಲಾಖೆಯ ಭೂಮಿ ಯಾರ ಒಡೆತನಕ್ಕೆ ಸೇರಿದೆ ಎಂಬುದು ಮಾಹಿತಿ ನೀಡುತ್ತಿಲ್ಲ. ತಿಮ್ಮಣ್ಣನಾಯಕನ ಕೆರೆಯಲ್ಲಿ ಜಮೀನು ಸಿಗುತ್ತೆ ಅಲ್ಲಿ ನಿರ್ಮಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ನವೀನ್ ಆಗ್ರಹ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮಾಧುರಿ ಗಿರೀಶ್, ವಕ್ತಾರ ನಾಗರಾಜ್ ಬೇದ್ರೆ ಭಾಗವಹಿಸಿದ್ದರು. 

 

 

 

- Advertisement -  - Advertisement - 
Share This Article
error: Content is protected !!
";