ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿದ್ದರಾಮಯ್ಯ ನೇತೃತ್ವದ ಹಗರಣಗಳ ಕರ್ನಾಟಕ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ದೇಶಕ್ಕೆ ನಂಬರ್‌ಒನ್‌ಸ್ಥಾನ ಅಲಂಕರಿಸಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
ವಿಧಾನಸೌಧದಿಂದಲೇ ಲಂಚ ಪಡೆಯುವುದಕ್ಕೆ ಅಧಿಕೃತವಾಗಿ ಚಾಲನೆ ನೀಡಿರುವ ಸಚಿವರುಗಳು, ಸರ್ಕಾರದ ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಶೇ.60ರಷ್ಟು ಕಮಿಷನ್‌ಜೇಬಿಗಿಳಿಸುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮ್ಮ ಸಂಪುಟದ ಮಂತ್ರಿಗಳು ಲೂಟಿ ಹೊಡೆಯುತ್ತಿರುವ ಶೇ.60ರಷ್ಟು ಕಮಿಷನ್‌ಹಣದಲ್ಲಿ ನಿಮಗೆ ಸಿಗುತ್ತಿರುವ ಪಾಲು ಎಷ್ಟು? ಎಂದು ಜೆಡಿಎಸ್ ಪ್ರಶ್ನಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ(KRDCL)ದಲ್ಲೂ ಲಂಚಾವತಾರ ಗುತ್ತಿಗೆದಾರರ ಜೀವ ಹಿಂಡುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಆತ್ಮಹತ್ಯೆಗಳಿಗೆ ಕೊಲೆಗಾರ ಕಾಂಗ್ರೆಸ್ ಸರ್ಕಾರವೇ ನೇರಹೊಣೆ ಎಂದು ಜೆಡಿಎಸ್ ತಿಳಿಸಿದೆ.